ಸಂಚಾರಿ ವಿಜಯ್ ಗಾದ ಕಷ್ಟ ನನಗೂ ಆಗಿದೆ: ನಟ ಅನಿರುದ್ಧ್
ನಾನೂ ಕೂಡಾ ಚಿತ್ರರಂಗದಲ್ಲಿ ಇಂತಹ ಅವಮಾನ ಎದುರಿಸಿದ್ದೇನೆ. ನಿಮ್ಮಲ್ಲಿ ಪ್ರತಿಭೆಯಿದೆ, ಆದರೆ ಮಾರುಕಟ್ಟೆಯಲ್ಲಿ ನಿಮ್ಮನ್ನು ಹಾಕಿಕೊಂಡು ಸಿನಿಮಾ ಮಾಡಿದರೆ ದುಡ್ಡು ಬರಲ್ಲ ಎಂದು ಎಷ್ಟೋ ಜನ ಅವಕಾಶ ನೀಡಿಲ್ಲ. ವಿಜಯ್ ಎದುರಿಸಿದ ಪರಿಸ್ಥಿತಿಯನ್ನೇ ನಾನೂ ಎದುರಿಸಿದ್ದೇನೆ. ಈ ನಿಟ್ಟಿನಲ್ಲಿ ನಾವು ಬೇರೆ ಚಿತ್ರರಂಗವನ್ನು ನೋಡಿ ಕಲಿಯಬೇಕು ಎಂದಿದ್ದಾರೆ. ಪ್ರತಿಭೆಗೆ ಅವಕಾಶ ನೀಡುವುದನ್ನು ಕಲಿಯಬೇಕು, ರೂಪಕ್ಕಲ್ಲ ಎಂದು ಅವರು ನೋವು ಹಂಚಿಕೊಂಡಿದ್ದಾರೆ.