ಬೆಂಗಳೂರು : ಸ್ಯಾಂಡಲ್‍ವುಡ್ ನ `ಯುಗಪುರುಷ’ ಚಿತ್ರದ ನಾಯಕ ನಟ ಅರ್ಜುನ್ ದೇವ್ ಅವರನ್ನು ಕೊಲ್ಲಲು ಸುಪಾರಿ ನೀಡಿರುವುದಾಗಿ ತಿಳಿದುಬಂದಿದ್ದು, ಈ ಪ್ರಕರಣ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ನಟ ಅರ್ಜುನ್ ದೇವ್ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರೂ ಕೂಡ ಆಗಿದ್ದು, ಅವರನ್ನು ಕೊಲ್ಲಲು ಕಾಶೀಫ್ ಎಂಬಾತ ಸುಪಾರಿ ಪಡೆದಿರುವುದಾಗಿ ತಿಳಿದುಬಂದಿದೆ. ಈ ಹಿಂದೆಯೂ ಕೂಡ ಅವರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದರು. ಆದ ಕಾರಣ ನಟ ಅರ್ಜುನ್ ದೇವ್ ಅವರು,’ನನ್ನನ್ನು ಕೊಲ್ಲಲು ಮನೆ ಮುಂದೆ ಹೊಂಚು ಹಾಕಿ ಹೋಗಿದ್ದಾರೆ. ಹೀಗಾಗಿ ದಯವಿಟ್ಟು ನನಗೆ ರಕ್ಷಣೆ ನೀಡಿ ‘ಎಂದು ಪೊಲೀಸ್ ಠಾಣೆಯಲ್ಲಿ ಮನವಿ ಮಾಡಿದ್ದಾರೆ. ಆದರೆ ಸುಪಾರಿ ಕೊಟ್ಟಿದ್ದು ಯಾರು? ಯಾವ ಕಾರಣಕ್ಕಾಗಿ ಎಂಬುದನ್ನು ಅವರು ತಿಳಿಸಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ