ಮೈಮುದ ನದಾಫ್, ನಾಗರಾಜ ಟೆಂಗಳಿ, ಡಾ.ಕಾಮ್ರಾನ್ ಕೈಸರ್, ಅಬ್ದುಲ್ ನಜೀಬ್, ಹಜರತ್ ಅಲಿ ನದಾಫ್, ಇಮಾಮಸಾಬ ನದಾಫ್, ನಾಸೀರ್ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ ಅಭ್ಯರ್ಥಿಗಳ ಪ್ರವೇಶ ಪತ್ರ, ಸಹಿ ಇರುವ ಖಾಲಿ ಚೆಕ್, ಅಭ್ಯರ್ಥಿಗಳ ಮೂಲ ದಾಖಲಾತಿಗಳು, ಅಂಕಪಟ್ಟಿಗಳು, 5 ಲಕ್ಷ ನಗದು ಹಣ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಶಿಕುಮಾರ್ ತಿಳಿಸಿದ್ದಾರೆ.
ಸರಕಾರಿ ನೌಕರರೇ ಹೆಚ್ಚು:
ಬಂಧಿತರದಲ್ಲಿ ಬಹುತೇಕರು ಸರಕಾರಿ ನೌಕರರಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಐವರನ್ನು ಪೊಲೀಸರು ಬಂಧಿಸಿದ್ದರು. ಸೂಕ್ಷ್ಮ ಬ್ಲೂಟೂತ್ ನಿಂದ ಪ್ರಶ್ನೆ ಪತ್ರಿಕೆ ಲೀಕ್ ಮಾಡಿ ಮತ್ತಿತರ ಮಾರ್ಗಗಳಿಂದ ಅಕ್ರಮವನ್ನು ಪರೀಕ್ಷೆಯಲ್ಲಿ ಈ ಆರೋಪಿಗಳು ಎಸಗುತ್ತಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಕೆಪಿಎಸ್ ಸಿ ಪರೀಕ್ಷೆ ಅಕ್ರಮದ ಮೂಲಕ 100ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ನೇಮಕಾತಿಯನ್ನು ಆರೋಪಿಗಳನ್ನು ಮಾಡಿಸಿದ್ದರು. ಅಕ್ರಮದಲ್ಲಿ ಪಾಲುದಾರರಾಗಿರುವ ಇನ್ನಷ್ಟು ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಕಲಬುರಗಿ ಎ ಉಪ ವಿಭಾಗದ ಎಎಸ್ ಪಿ ಲೋಕೇಶ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಆರೋಪಿಗಳನ್ನು ಬಂಧನ ಮಾಡಲಾಗಿದೆ.