ಬಾಲಿವುಡ್ ನಟ ಅರ್ಮಾನ್ ಕೊಹ್ಲಿ ಅರೆಸ್ಟ್!

ಭಾನುವಾರ, 29 ಆಗಸ್ಟ್ 2021 (14:59 IST)
ಮನೆಯಲ್ಲಿ ನಿಷೇಧಿತ ಡ್ರಗ್ಸ್ ಪತ್ತೆಯಾದ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗಿದ್ದ ಬಾಲಿವುಡ್ ನಟ ಅರ್ಮಾನ್ ಕೊಹ್ಲಿ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಅರ್ಮಾನ್ ಕೊಹ್ಲಿ ಅವರ ಮನೆಯಲ್ಲಿ ಅಲ್ಪ ಪ್ರಮಾಣದಲ್ಲಿ ಕೋಕೆನ್ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಲಾಗಿದ್ದು, ಸಮರ್ಪಕ ಮಾಹಿತಿ ಲಭ್ಯವಾಗದ ಕಾರಣ ಬಂಧಿಸಲಾಗಿದೆ ಎಂದು ಉದ್ದೀಪನ ನಿಗ್ರಹ ಘಟಕ (ಎನ್ ಸಿಬಿ) ವಾಂಖೇಡೆ ವಲಯ ನಿರ್ದೇಶಕ ಹೇಳಿದ್ದಾರೆ.
ಅರ್ಮಾನ್ ಕೊಹ್ಲಿ ಮನೆಯಲ್ಲಿ ಪತ್ತೆಯಾದ ಕೋಕೆನ್ ದಕ್ಷಿಣ ಅಮೆರಿಕ ಮೂಲದ್ದಾಗಿದೆ. ಆದ್ದರಿಂದ ಇದರ ಹಿಂದೆ ಅಂತಾರಾಷ್ಟ್ರೀಯ ಮಾರುಕಟ್ಟೆಯ ಸಂರ್ಪಕ ಸಾಧ್ಯತೆ ಇದೆ. ಮುಂಬೈಗೆ ಹೇಗೆ ಬಂತು ಎಂಬುದರ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ