ಮಾಧ್ಯಮಗಳ ಕ್ಷಮೆ ಕೇಳಿದ ಚಾಲೆಂಜಿಂಗ್ ಸ್ಟಾರ್ ದರ್ಶನ್: ಡಿ ಬಾಸ್ ಮೇಲಿದ್ದ ನಿಷೇಧ ವಾಪಸ್

ಶನಿವಾರ, 26 ಆಗಸ್ಟ್ 2023 (07:40 IST)
ಬೆಂಗಳೂರು: ಕಳೆದ ಎರಡು ವರ್ಷಗಳಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಮಾಧ‍್ಯಮಗಳ ನಡುವೆ ನಡೆದಿದ್ದ ಮುನಿಸು ಮಾಯವಾಗಿದ್ದು ಪ್ರಕರಣ ಸುಖಾಂತ್ಯವಾಗಿದೆ.

ನಿನ್ನೆ ವರ ಮಹಾಲಕ್ಷ್ಮಿ ಹಬ್ಬದ ದಿನ ದರ್ಶನ್ ಸೋಷಿಯಲ್ ಮೀಡಿಯಾ ಮೂಲಕ ಬಹಿರಂಗವಾಗಿ ಮಾಧ‍್ಯಮಗಳ ಕ್ಷಮೆ ಯಾಚಿಸಿದ್ದಾರೆ. ಇದಕ್ಕೆ ಮೊದಲು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮಧ‍್ಯಸ್ಥಿಕೆಯಲ್ಲಿ ಮಾಧ‍್ಯಮದ ಪ್ರಮುಖರು ಮತ್ತು ದರ್ಶನ್ ನಡುವೆ ಸಂಧಾನ ಮಾತುಕತೆ ನಡೆದಿತ್ತು.

ಮಾಧ‍್ಯಮಗಳ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆಂಬ ಕಾರಣಕ್ಕೆ ಬಹುತೇಕ ಹೆಚ್ಚಿನ ಮಾಧ್ಯಮಗಳು ಅವರ ಕುರಿತ ಸುದ್ದಿಗಳಿಗೆ ನಿರ್ಬಂಧ ವಿಧಿಸಿತ್ತು. ಇದೀಗ ಪ್ರಕರಣ ಸುಖಾಂತ್ಯವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ