ನಿಖಿಲ್ ಕುಮಾರಸ್ವಾಮಿ ಬ್ಯಾಕ್ ಟು ಫಿಲಂಸ್: ಇಂದು ಮುಹೂರ್ತ

ಬುಧವಾರ, 23 ಆಗಸ್ಟ್ 2023 (08:40 IST)
ಬೆಂಗಳೂರು: ನಟ ನಿಖಿಲ್ ಕುಮಾರಸ್ವಾಮಿ ರಾಜಕೀಯ ರಂಗದಲ್ಲಿ ಬ್ಯುಸಿಯಾದ ಬಳಿಕ ಸಿನಿಮಾಗಳಿಂದ ಕೆಲವು ದಿನ ದೂರವಾಗಿದ್ದರು. ಇದೀಗ ಮತ್ತೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ.

ನಿಖಿಲ್ ಕುಮಾರಸ್ವಾಮಿ ಸಿನಿಮಾಗೆ ಲೈಕಾ ಪ್ರೊಡಕ್ಷನ್ಸ್ ಬಂಡವಾಳ ಹಾಕಲಿದೆ. ಇಂದು ನಿಖಿಲ್ ಹೊಸ ಚಿತ್ರಕ್ಕೆ ಮುಹೂರ್ತ ನೆರವೇರಲಿದೆ.

ಜಾಗ್ವಾರ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಿಖಿಲ್ ಬಳಿಕ ಸೀತಾರಾಮ ಕಲ್ಯಾಣ, ಕುರುಕ್ಷೇತ್ರ, ರೈಡರ್ ಸಿನಿಮಾದಲ್ಲಿ ನಟಿಸಿದ್ದರು. ಇದೀಗ ಪ್ರತಿಷ್ಠಿತ ಲೈಕಾ ಸಂಸ್ಥೆಯೊಂದಿಗೆ ಅವರು ಕೈ ಜೋಡಿಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ