ನಾನು ಪಕ್ಕಾ ಹಿಂದೂ, ಹಸು ಕೆಚ್ಚಲು ಕೊಯ್ದವನಿಗೆ...: ನಟ ಧ್ರುವ ಸರ್ಜಾ ಖಡಕ್ ಪ್ರತಿಕ್ರಿಯೆ

Krishnaveni K

ಸೋಮವಾರ, 13 ಜನವರಿ 2025 (15:08 IST)
ಬೆಂಗಳೂರು: ಚಾಮರಾಜಪೇಟೆಯಲ್ಲಿ ಹಸುಗಳ ಮೇಲೆ ವಿಕೃತಿ ಮೆರೆದ ಘಟನೆ ಬಗ್ಗೆ ನಟ ಧ್ರುವ ಸರ್ಜಾ ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ. ನಾನು ಪಕ್ಕಾ ಹಿಂದೂ ಎಂದಿದ್ದಾರೆ.

ಚಾಮರಾಜಪೇಟೆಯಲ್ಲಿ ಶನಿವಾರ ತಡರಾತ್ರಿ ಕರ್ಣ ಎಂಬವರಿಗೆ ಸೇರಿದ ಮೂರು ಹಸುಗಳ ಕೆಚ್ಚಲು ಕುಯ್ದು ಕಾಲಿಗೆ ಮಚ್ಚಿನ ಹಲ್ಲೆ ಮಾಡಿ ಗಾಯಗೊಳಿಸಿ ವಿಕೃತಿ ಮೆರೆಯಲಾಗಿತ್ತು. ಈ ಘಟನೆ ದೇಶದಾದ್ಯಂತ ಗಮನ ಸೆಳೆದಿದೆ.

ಇದರ ಬಗ್ಗೆ ಖಾಸಗಿ ವಾಹಿನಿಗೆ ಪ್ರತಿಕ್ರಿಯಿಸಿರುವ ನಟ ಧ್ರುವ ಸರ್ಜಾ, ‘ಇಂತಹ ವಿಚಾರದ ಬಗ್ಗೆ ವಿಚಾರಣೆ ಹಂತದಲ್ಲಿರುವಾಗ ಏನು ಹೇಳಲು ಸಾಧ್ಯ? ಆದರೆ ಒಂದು ವಿಚಾರ ಪ್ರಾಮಾಣಿಕವಾಗಿ ಹೇಳ್ತೀನಿ. ನಾನು ಪಕ್ಕಾ ಹಿಂದೂ. ಹಸುವಿನ ಮೇಲೆ ಕ್ರೌರ್ಯ ನಡೆಸಿದವರಿಗೆ ಕಾನೂನಿನ ಪ್ರಕಾರ ಏನು ಕಠಿಣ ಶಿಕ್ಷೆ ಕೊಡ್ತಾರೋ ಕೊಡಲಿ’ ಎಂದು ಧ್ರುವ ಸರ್ಜಾ ಹೇಳಿದ್ದಾರೆ.

ಪ್ರಾಣಿ ಪ್ರಿಯನಾಗಿ ಇಂತಹದ್ದೊಂದು ಘಟನೆ ಬಗ್ಗೆ ಕೇಳಿದಾಗ ನಿಜಕ್ಕೂ ಬೇಸರವಾಗುತ್ತದೆ. ಇಂತಹ ವ್ಯಕ್ತಿಗಳಿಗೆ ಕಠಿಣ ಶಿಕ್ಷೆ ಸಿಗಬೇಕು ಎಂದು ಧ್ರುವ ಸರ್ಜಾ ಪ್ರತಿಕ್ರಿಯೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ