ಅಮೆರಿಕದ ಬೀಚ್‌ನಲ್ಲಿ ಶಿವಣ್ಣ ಫೋಸ್‌: ನಿಮ್ಮ ಎನರ್ಜಿಗೆ ಸಾಟಿಯಿಲ್ಲ ಎಂದ ಹ್ಯಾಟ್ರಿಕ್‌ ಹೀರೋ ಫ್ಯಾನ್ಸ್‌

Sampriya

ಶನಿವಾರ, 11 ಜನವರಿ 2025 (15:02 IST)
Photo Courtesy X
ಬೆಂಗಳೂರು: ಹ್ಯಾಟ್ರಿಕ್‌ ಹೀರೋ ಶಿವರಾಜ್​ಕುಮಾರ್ ಅವರು ಇತ್ತೀಚೆಗೆ ಅಮೆರಿಕದಲ್ಲಿ ಕ್ಯಾನ್ಸರ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈಗ ಅವರು ಮೂತ್ರಕೋಶದ ಕ್ಯಾನ್ಸರ್​ನಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಈಗ ಅವರ ಎನರ್ಜಿ ಕಂಡು ಅಭಿಮಾನಿಗಳು ಫುಲ್‌ ಖುಷಿಪಟ್ಟಿದ್ದಾರೆ.

ಶಿವರಾಜ್​ಕುಮಾರ್ ಡಿಸೆಂಬರ್ 18ರಂದು ಅಮೆರಿಕಕ್ಕೆ ತೆರಳಿದರು. ಡಿಸೆಂಬರ್ 24ರಂದು ಅಮೆರಿಕದ ಫ್ಲೋರಿಡಾದಲ್ಲಿ ಮಿಯಾಮಿ ಕ್ಯಾನ್ಸರ್​ ಇನ್​ಸ್ಟಿಟ್ಯೂಟ್​ನಲ್ಲಿ ಶಸ್ತ್ರಚಿಕಿತ್ಸೆ ನಡೆದಿದೆ. ನಾಲ್ಕೈದು ಗಂಟೆಗಳ ಕಾಲ ಸರ್ಜರಿ ನಡೆದಿತ್ತು. ಈಗ ಶಿವಣ್ಣ ಅಮೆರಿಕದಲ್ಲಿ ಕುಟುಂಬದ ಜೊತೆ ನಿಂತಿರುವ ಫೋಟೋ ವೈರಲ್ ಆಗಿದೆ .

ಶಿವರಾಜ್​ಕುಮಾರ್ ಅವರ ಹೊಸ ಫೋಟೋಗಳು ವೈರಲ್ ಆಗಿವೆ. ಮಿಯಾಮಿಯಲ್ಲಿ ಅವರು ಸುತ್ತಾಟ ನಡೆಸುತ್ತಿದ್ದಾರೆ. ಮುಂದಿನ ಕೆಲ ದಿನಗಳನ್ನು ಅವರು ಅಲ್ಲಿಯೇ ಕಳೆಯಲಿದ್ದಾರೆ. ಸಂಪೂರ್ಣ ಗುಣಮುಖರಾದ ಬಳಿಕ ಅವರು ಮರಳಲಿದ್ದಾರೆ.

ಸದ್ಯ ಶಿವರಾಜ್​ಕುಮಾರ್ ಅವರು ಅಮೆರಿಕದಲ್ಲೇ ಇದ್ದಾರೆ. ಜನವರಿ 24ರವರೆಗೆ ಅಲ್ಲಿಯೇ ಇರಲಿದ್ದಾರೆ. ಈಗ ಅವರು ಚೇತರಿಕೆ ಕಾಣುತ್ತಿದ್ದು, ಆಸ್ಪತ್ರೆಯ ಸುತ್ತಮುತ್ತ ಇರುವ ಪ್ರದೇಶಗಳನ್ನು ಅವರು ವೀಕ್ಷಿಸುತ್ತಾ  ಇದ್ದಾರೆ. ಸಮುದ್ರ ತೀರದಲ್ಲಿ ಕುಟುಂಬದ ಜೊತೆ ಸಮಯ ಕಳೆದಿದ್ದಾರೆ.

ಶಿವರಾಜ್​ಕುಮಾರ್ ಅವರ ಹೊಸ ಲುಕ್ ಎಲ್ಲರ ಗಮನ ಸೆಳೆದಿದೆ. ಅವರು ಮೊದಲಿನ ಎನರ್ಜಿಯನ್ನು ಮತ್ತೆ ತಂದುಕೊಂಡಂತೆ ಕಾಣುತ್ತಿದೆ. ಕೂಲಿಂಗ್‌ ಗ್ಲಾಸ್‌ನಲ್ಲಿ ನೀಡಿದ ಫೋಸ್‌ಗೆ ಅಭಿಮಾನಿಗಳು ಫುಲ್‌ ಫಿದಾ ಆಗಿದ್ದಾರೆ. ನಿಮಗೆ ನೀವೇ ಸಾಟಿ ಎಂದು ಕೊಂಡಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ