ನವಗ್ರಹ ಸಿನಿಮಾದಲ್ಲಿ ಅಭಿನಯಿಸಿದ್ದ ನಟ ಗಿರಿ ದಿನೇಶ್‌ ಇನ್ನಿಲ್ಲ, ಸಾವಿಗೆ ಕಾರಣವೇನು

Sampriya

ಶನಿವಾರ, 8 ಫೆಬ್ರವರಿ 2025 (10:19 IST)
Photo Courtesy X
ಬೆಂಗಳೂರು: ನವಗ್ರಹ ಸಿನಿಮಾದಲ್ಲಿ ಅಭಿನಯಿಸಿದ್ದ ನಟ ಗಿರಿ ದಿನೇಶ್ ಇಂದು (ಫೆ.7) ನಿಧನರಾಗಿದ್ದಾರೆ.

ದಿವಂಗತ ನಟ ದಿನೇಶ್ ಅವರ ಪುತ್ರರಾಗಿದ್ದಾರೆ. ಇವರು ನವಗ್ರಹ ಸಿನಿಮಾದಲ್ಲಿ 9ಖಳನಟರ ಪುತ್ರರಲ್ಲಿ ಒಬ್ಬರಾಗಿದ್ದರು.

ಚಮ್ಕಾಯ್ಸು ಚಿಂದಿ ಉಡಾಯ್ಸು ಚಿತ್ರದಲ್ಲೂ ಅವರು ನಟಿಸಿದ್ದರು. ಆದರೆ ಆವರಿಗೆ ಅಂದಯಕೊಂಡಷ್ಟು ಹೆಚ್ಚಿನ ಸಿನಿಮಾ ಅವಕಾಶಗಳು ಅರಸಿ ಬಂದಿರಲಿಲ್ಲ.

ಈಚೆಗೆ ನವಗ್ರಹ ಸಿನಿಮಾ ರೀ ರಿಲೀಸ್ ಸಂದರ್ಭದಲ್ಲೂ ಅವರನ್ನು ಚಿತ್ರತಂಡ ಸಂಪರ್ಕಿಸಿದಾಗ ದೂರ ಉಳಿದಿದ್ದರು ಎಂಬ ಮಾಹಿತಿ ಬಂದಿದೆ. ನಿನ್ನೆ ಸಂಜೆ ವೇಳೆ ಅಸ್ವಸ್ಥರಾಗಿ ಕುಸಿದು ಬಿದಿದ್ದರು. ಬಳಿಕ ಆಸ್ಪತ್ರೆಗೆ ದಾಖಲಿಸಿದಾಗ ನಿಧನರಾಗಿದ್ದಾರೆ. ಅವರಿಗೆ ಮದುವೆಯಾಗಿರಲಿಲ್ಲ. ಅಣ್ಣನಮನೆಯಲ್ಲಿ ವಾಸವಿದ್ದರು ಎಂದು ತಿಳಿದುಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ