ನಟಿ ಜಯಮಾಲಾ ಮನೆಯಲ್ಲಿ ಮದುವೆ ಸಂಭ್ರಮ, ಕುಣಿದು ಕುಪ್ಪಳಿಸಿದ ಸ್ಯಾಂಡಲ್‌ವುಡ್‌ ಸ್ಟಾರ್ಸ್‌

Sampriya

ಗುರುವಾರ, 6 ಫೆಬ್ರವರಿ 2025 (18:01 IST)
Photo Courtesy X
ಸ್ಯಾಂಡಲ್​ವುಡ್​ ಹಿರಿಯ ನಟಿ ಜಯಮಾಲಾ ಅವರ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಜಯಮಾಲಾ ಮಗಳ ಸೌಂದರ್ಯ ಅವರ ಮದುವೆ 7, 8ರಂದು ನಡೆಯಲಿದೆ. ಇದೀಗ ನಡೆದ ಹರಿಶಿನ ಶಾಸ್ತ್ರದಲ್ಲಿ ಸ್ಯಾಂಡಲ್‌ವುಡ್ ತಾರೆಯಲು ಕುಣಿದು ಕುಪ್ಪಳಿಸಿದ್ದಾರೆ. ಜಯಮಾಲಾ ಮಗಳು ಸೌಂದರ್ಯ ಅವರ ಹಳದಿ ಶಾಸ್ತ್ರ ಅದ್ಧೂರಿಯಾಗಿ ನಡೆದಿದೆ.

ಸೌಂದರ್ಯ ಜಯಮಾಲಾ ಅವರು ಎರಡು ವರ್ಷಗಳ ಕಾಲ ಅಭಿನಯಿಸಿ ಆ ನಂತರ ಸಿನಿಮಾ ರಂಗದಿಂದ ದೂರ ಉಳಿದುಕೊಂಡಿದ್ದರು. ಇದೀಗ ರುಷಬ್‌ ಕೆ ಎಂಬುವವರ ಜೊತೆ ಸೌಂದರ್ಯ ಹಸೆಮಣೆ ಏರಲಿದ್ದಾರೆ.

ನಟಿ ಜಯಮಾಲಾ ಮಗಳ ಮದುವೆಯು ಫೆಬ್ರವರಿ 7, 8ರಂದು ನಡೆಯಲಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಈ ಮದುವೆ ನಡೆಯಲಿದೆ. ಇನ್ನೂ, ಸೌಂದರ್ಯ ಹಳದಿ ಶಾಸ್ತ್ರಕ್ಕೆ ಸ್ಯಾಂಡಲ್​ವುಡ್​ ಹಿರಿಯ ನಟಿಯರು ಭಾಗಿಯಾಗಿದ್ದು ವಿಶೇಷವಾಗಿತ್ತು.

ಹಳದಿ ಶಾಸ್ತ್ರವು ಬೆಂಗಳೂರಿನ ಲಲಿತ್‌ ಅಶೋಕ್‌ ಹೋಟೆಲ್‌ನಲ್ಲಿ ನಡೆದಿದೆ. ಈ ಸಮಾರಂಭದಲ್ಲಿ ಸ್ಯಾಂಡಲ್‌ವುಡ್‌ ನಟಿಯರಾದ ಶ್ರುತಿ, ಮಾಳವಿಕಾ ಅವಿನಾಶ್‌, ಸುಧಾರಾಣಿ, ಉಮಾಶ್ರೀ, ಪ್ರಮೀಳಾ ಜೋಷಾಯ್‌, ಗಿರಿಜಾ ಲೋಕೇಶ್‌, ಹರ್ಷಿಕಾ ಪೂಣಚ್ಛ, ಅನು ಪ್ರಭಾಕರ್‌, ಪ್ರಿಯಾಂಕಾ ಉಪೇಂದ್ರ, ಭಾರತಿ ವಿಷ್ಣುವರ್ಧನ್‌, ಹೇಮಾ ಚೌಧರಿ, ಸುಧಾ ನರಸಿಂಹರಾಜು ಮುಂತಾದ ಹಿರಿಯ ನಟಿಯರು ಭಾಗವಹಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ