ಮಟ ಮಟ ಮಧ್ಯಾಹ್ನ ಲೈವ್ ಬಂದು ಜಗ್ಗೇಶ್ ಸಿಎಂ ಕುಮಾರಸ್ವಾಮಿಗೆ ಮಾಡಿದ ಮನವಿಯೇನು?
ಶುಕ್ರವಾರ, 28 ಡಿಸೆಂಬರ್ 2018 (16:21 IST)
ಬೆಂಗಳೂರು: ಸಾಮಾನ್ಯವಾಗಿ ನಮ್ಮ ಸುತ್ತಲು ನಡೆಯುವ ಯಾವುದೇ ವಿಚಾರಗಳ ಬಗ್ಗೆ ನವರಸನಾಯಕ ಜಗ್ಗೇಶ್ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡುತ್ತಿರುತ್ತಾರೆ. ಆದರೆ ಈ ಬಾರಿ ಅವರು ಲೈವ್ ಬಂದು ಸಿಎಂ ಕುಮಾರಸ್ವಾಮಿಗೆ ವಿಶೇಷ ಮನವಿ ಮಾಡಿದ್ದಾರೆ.
ಮಧ್ಯಾಹ್ನ ತಮ್ಮ ಸಾಮಾಜಿಕ ಜಾಲತಾಣದ ಪೇಜ್ ನಲ್ಲಿ ಲೈವ್ ಬಂದಿರುವ ಜಗ್ಗೇಶ್ ಹಿಂದೂಗಳ ಆರಾಧ್ಯ ದೈವ ಶ್ರೀರಾಮಚಂದ್ರನ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಪ್ರೊ. ಭಗವಾನ್ ಮಾತಿಗೆ ಕಡಿವಾಣ ಹಾಕಿ ಎಂದು ಸಿಎಂ ಕುಮಾರಸ್ವಾಮಿಗೆ ಮನವಿ ಮಾಡಿದ್ದಾರೆ.
ಒಬ್ಬ ಭಾರತೀಯನಾಗಿ, ಈ ದೇಶದ ಸಂಸ್ಕೃತಿಯನ್ನು ಪ್ರೀತಿಸುವವನಾಗಿ ಈ ಮನವಿ ಮಾಡುತ್ತೇನೆ ಎಂದಿರುವ ಜಗ್ಗೇಶ್ ನನಗೆ ಅನಾರೋಗ್ಯವಿದೆ. ಹಾಗಿದ್ದರೂ ನಾವೆಲ್ಲರೂ ಆರಾಧಿಸುವ ರಾಮಚಂದ್ರನ ಬಗ್ಗೆ ಅವಹೇಳನವಾಗಿ ಮಾತನಾಡಿರುವ, ಶ್ರೀರಾಮನ ಅಸ್ಥಿತ್ವವನ್ನೇ ಪ್ರಶ್ನಿಸಿ ನಮ್ಮ ನಂಬಿಕೆ, ಭಾವನೆಗಳಿಗೆ ಧಕ್ಕೆ ತರುವವರ ಮಾತಿಗೆ ಕಡಿವಾಣ ಹಾಕಿ ಎಂದಿದ್ದಾರೆ.
ಇದಕ್ಕೆ ಹಲವು ಪುರಾಣ, ಇತಿಹಾಸದ ಉದಾಹರಣೆ, ಸಾಕ್ಷ್ಯಗಳನ್ನು ಉಲ್ಲೇಖಿಸಿ ಸುಮಾರು 20 ನಿಮಿಷಗಳ ಲೈವ್ ವಿಡಿಯೋ ಮಾಡಿ ಸಿಎಂ ಕುಮಾರಸ್ವಾಮಿಗೆ ಟ್ಯಾಗ್ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ