BB Season 12: ಮೂರನೇ ದಿನ ಧನುಷ್ ವಿರುದ್ಧ ರೆಬಲ್ ಆದ ಅಶ್ವಿನಿ ಗೌಡಗೆ ನೆಟ್ಟಿಗರಿಂದ ಕ್ಲಾಸ್‌

Sampriya

ಬುಧವಾರ, 1 ಅಕ್ಟೋಬರ್ 2025 (19:34 IST)
p
ಕನ್ನಡದ ಬಿಗ್‌ಬಾಸ್‌ 12ನೇ ಆವೃತ್ತಿ ಶುರುವಾದ 2ನೇ ದಿನದಲ್ಲಿ ಹಾಸ್ಯ ನಟ ಗಿಲ್ಲಿ ಹಾಗೂ ನಟಿ ಕಾವ್ಯ ವಿರುದ್ಧ ಗರಂ ಆಗಿದ್ದ ಅಶ್ವಿನಿ ಗೌಡ ಮೂರನೇ ದಿನವೂ ಮತ್ತೊಬ್ಬ ಸಹಸ್ಪರ್ಧಿ ವಿರುದ್ಧ ರೆಬಲ್ ಆಗಿದ್ದಾರೆ. 

ಕಲರ್ಸ್ ಕನ್ನಡ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮದಲ್ಲಿ ಪ್ರೊಮೋ ಒಂದನ್ನು ಬಿಡುಗಡೆ ಮಾಡಿದೆ. ಆ ಪ್ರೊಮೋದಲ್ಲಿ ನಟಿ, ಕನ್ನಡಪರ ಹೋರಾಟಗಾರ್ತಿ ಅಶ್ವಿನಿ ಗೌಡ ಅವರು ನಟ ಧನುಷ್ ಗೌಡ ವಿರುದ್ಧ ಗರಂ ಆಗಿದ್ದಾರೆ. 

ಪ್ರೋಮೋದಲ್ಲಿ ನಾವು ರಾಜಮಾತೆಯನ್ನಾಗಿ ನಿಮ್ಮನ್ನು ಏನೋ ತೆಗೆದುಕೊಂಡಿದ್ದೇವೆ ಎಂದು ಧನುಷ್ ಹೇಳುತ್ತಾರೆ. ಅದಕ್ಕೆ ಗರಂ ಆದ ಅಶ್ವಿನಿ,  ಏನೋ ತೆಗೊಂಡಿದ್ದೇವೆ ಅಂದ್ರೆ ಏನರ್ಥ ಎಂದು ಧನುಷ್ ಮೇಲೆ ರೆಬಲ್ ಆಗಿದ್ದಾರೆ. 

ಈ ಪ್ರೋಮೋ ನೋಡಿದ ಬಿಗ್‌ಬಾಸ್ ಅಭಿಮಾನಿಗಳು ಅಶ್ವಿನಿ ಅವರ ನಡೆಗೆ ವಿರುದ್ಧ ಟೀಕೆ ಮಾಡುತ್ತಿದ್ದಾರೆ. 

ಯಾಕೆ ಈ ಅಮ್ಮ ಮೇಲೆ ಬಿದ್ದು ಜಗಳಕ್ಕೆ ಹೋಗುತ್ತಿದ್ದಾರೆ. ಇವರ ನಡವಳಿಕೆ ತುಂಬಾನೇ ಓವರ್ ಆಯಿತು ಎಂದು ಕಮೆಂಟ್ ಮಾಡುತ್ತಿದ್ದಾರೆ. 

ಜಗಳ ಮಾಡಿದ್ರೆ ಕೊನೆಯವರೆಗೆ ಇರ್ಬೋದು ಎಂದು ಇವರು ಹೊರಗಡೆಯೇ ಡಿಸೈಡ್ ಮಾಡಿಕೊಂಡು ಬಂದಿದ್ದಾರೆ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. 

ಧನುಷ್ ಮಾತಿಗೆ ರೆಬಲ್ ಆದ್ರು ಅಶ್ವಿನಿ ಗೌಡ

ಬಿಗ್ ಬಾಸ್ ಕನ್ನಡ ಸೀಸನ್ 12 | ಸೋಮ-ಶುಕ್ರ ರಾತ್ರಿ 9:30 | ಶನಿ-ಭಾನು ರಾತ್ರಿ 9#BiggBossKannada12 #BBK12 #ColorsKannada #AdeBeruHosaChiguru #ಕಲರ್‌ಫುಲ್‌‌ಕತೆ #colorfulstory #KicchaSudeep #ExpectTheUnexpected #CKSP pic.twitter.com/MNWJ80ljlM

— Colors Kannada (@ColorsKannada) October 1, 2025

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ