ಪೊಲೀಸರ ಕಾರ್ಯದಲ್ಲಿ ಕೈಜೋಡಿಸಿದ ನಟ ಜೂನಿಯರ್ ಎನ್ ಟಿಆರ್

ಬುಧವಾರ, 6 ಜನವರಿ 2021 (10:17 IST)
ಹೈದರಾಬಾದ್ : ಟಾಲಿವುಡ್ ನಟ ಜೂನಿಯರ್ ಎನ್ ಟಿಆರ್ ಅವರು ಆನ್ ಲೈನ್ ಹಗರಣದ  ಬಗ್ಗೆ ಜಾಗೃತಿ ಮೂಡಿಲು ತೆಲಂಗಾಣ ಪೊಲೀಸರ ಪರ ಕಾರ್ಯನಿರ್ವಹಿಸಿದ್ದಾರೆ ಎನ್ನಲಾಗಿದೆ.

ಇತ್ತೀಚಿನ ದಿನಗಳಲ್ಲಿ ಆನ್ ಲೈನ್ ನಲ್ಲಿ ಹಗರಣಗಳು ಹೆಚ್ಚಾಗಿ ನಡೆಯುತ್ತಿವೆ. ಹುಡುಗಿಯರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಅವರಿಂದ ಪೋನ್ ನಂಬರ್ ತೆಗೆದುಕೊಂಡು ಅವರನ್ನು ದುರ್ಬಳಕೆ ಮಾಡಿಕೊಳ್ಳುತ್ತಿರವ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದೆ.

ಈ ನಿಟ್ಟಿನಲ್ಲಿ ಇಂತಹ ಗ್ಯಾಂಗ್ ಗಳಿಂದ ಜಾಗರೂಕರಾಗಿರಬೇಕೆಂಬ ಮಸೇಜ್ ನ್ನು ನಟ ಜೂನಿಯರ್ ಎನ್ ಟಿಆರ್ ಹೇಳುವ ವಿಡಿಯೋವನ್ನು ಹರಿಬಿಡಲಾಗಿದೆ. ಆ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಪೊಲೀಸರ ಕಾರ್ಯದಲ್ಲಿ ನಟ ಕೈಜೋಡಿಸಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ