ಹಣಕ್ಕಾಗಿ ಮಗುವನ್ನು ಮಾರಾಟ ಮಾಡಿದ ತಂದೆ!

ಮಂಗಳವಾರ, 5 ಜನವರಿ 2021 (07:55 IST)
ಹೈದರಾಬಾದ್ : ಒಂದು ತಿಂಗಳ  ಮಗುವನ್ನು ತಂದೆಯೇ ದಂಪತಿಗಳಿಗೆ  ಹಣಕ್ಕಾಗಿ ಮಾರಾಟ ಮಾಡಿದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

ಮಗುವಿನ ತಂದೆತಾಯಿ ಪುಟ್ ಪಾತ್ ನಲ್ಲಿ ವಾಸಿಸುತ್ತಿರುವುದನ್ನು ನೋಡಿದ ದಂಪತಿಗಳು ಮಗುವನ್ನು ಕೇಳಿದ್ದಾರೆ. ಆಗ ತಂದೆ ತಾಯಿಗೆ ತಿಳಿಯದಂತೆ ಮಗುವನ್ನು 70ಸಾವಿರ ರೂ.ಗಳಿಗೆ ಮಾರಾಟ ಮಾಡಿದ್ದಾನೆ.

ಈ ಬಗ್ಗೆ ತಾಯಿ ಪೊಲೀಸರಿಗೆ ದೂರು ನೀಡಿದ ಹಿನ್ನಲೆಯಲ್ಲಿ ಪೊಲೀಸರು ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲಿಸಿ ಮಗುವನ್ನು ಪತ್ತೆ ಮಾಡಿ ಮಕ್ಕಳ ಕಲ್ಯಾಣ ಇಲಾಖೆಗೆ ಹಸ್ತಾಂತರಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ