ನಟ ನಾಗಚೈತನ್ಯ- ಶೋಭಿತಾಗೆ ಇಂದು ರಾತ್ರಿ ಹಸೆಮಣೆಗೆ: ಸೆಲೆಬ್ರಿಟಿಗಳ ದಂಡೇ ಹಾಜರು ನಿರೀಕ್ಷೆ

Sampriya

ಬುಧವಾರ, 4 ಡಿಸೆಂಬರ್ 2024 (15:04 IST)
Photo Courtesy X
ಹೈದರಾಬಾದ್‌: ಟಾಲಿವುಡ್ ನಟ ನಾಗಚೈತನ್ಯ ಮತ್ತು ಶೋಭಿತಾ ಇಂದು ಹೈದರಾಬಾದ್‌ನಲ್ಲಿ ಅದ್ಧೂರಿಯಾಗಿ ಹಸೆಮಣೆಯೇರುತ್ತಿದ್ದಾರೆ. ನಾಗಾರ್ಜುನ ಪುತ್ರಿನ ಮದುವೆಗೆ ಇಂದು ಸೆಲೆಬ್ರಿಟಿಗಳ ದಂಡೇ ಹರಿದುಬರಲಿದೆ.

ನಾಗಚೈತನ್ಯ ಮದುವೆಗೆ ರಾಮ್ ಚರಣ್ ದಂಪತಿ, ಮಹೇಶ್ ಬಾಬು ದಂಪತಿ, ರಾಜಮೌಳಿ, ನಯನತಾರಾ, ಪ್ರಭಾಸ್, ಅಲ್ಲು ಅರ್ಜುನ್, ಸುಕುಮಾರ್ ಸೇರಿದಂತೆ ಅನೇಕರು ಭಾಗಿಯಾಗಲಿದ್ದಾರೆ. ಒಟ್ಟು 300 ಸ್ಟಾರ್ ಸೆಲೆಬ್ರಿಟಿಗಳಿಗೆ ಆಹ್ವಾನ ನೀಡಲಾಗಿದೆ.

ನಾಗಾರ್ಜುನ ಅಕ್ಕಿನೇನಿ ಒಡೆತನದ ಅನ್ನಪೂರ್ಣ ಸ್ಪುಡಿಯೋದಲ್ಲಿ ಮದುವೆ ನಡೆಯಲಿದೆ. ರಾತ್ರಿ 8:15 ವೇಳೆ ಮದುವೆ ಮುಹೂರ್ತ ಕಾರ್ಯಕ್ರಮ ಜರುಗಲಿದೆ. ಈಗಾಗಲೇ ವಿವಾಹ ಪೂರ್ವ ಕಾರ್ಯಗಳು ಕೂಡ ಸಂಭ್ರಮದಿಂದ ನೆರವೇರಿದೆ.  

ನಟಿ ಸಮಂತಾ ಜೊತೆ 2017ರಲ್ಲಿ ನಾಗಚೈತನ್ಯ ಮದುವೆಯಾಗಿದ್ದರು. ಕೆಲ ಮನಸ್ತಾಪಗಳಿಂದ ಇಬ್ಬರೂ ಡಿವೋರ್ಸ್ ಪಡೆದುಕೊಳ್ಳುವುದಾಗಿ 2021ರಲ್ಲಿ ಅನೌನ್ಸ್ ಮಾಡಿದರು. ಈಗ ಶೋಭಿತಾ ಜೊತೆ ನಟ 2ನೇ ಮದುವೆಯಾಗುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ