ಹೆಚ್ ಐಟಿ’ ಚಿತ್ರದ ಸೀಕ್ವೆಲ್ ತೆಗೆಯುವುದಾಗಿ ಘೋಷಣೆ ಮಾಡಿದ ನಟ ನಾನಿ

ಮಂಗಳವಾರ, 2 ಮಾರ್ಚ್ 2021 (15:53 IST)
ಹೈದರಾಬಾದ್ :  ಕಳೆದ ವರ್ಷ ಫೆಬ್ರವರಿ 28ರಂದು ಬಿಡುಗಡೆಯಾಗಿ ಸೂಪರ್ ಹಿಟ್ ಆದ ‘ಹೆಚ್ ಐಟಿ’ ಚಿತ್ರದ ಸೀಕ್ವೆಲ್ ನಿರ್ಮಾಣ ಮಾಡುವುದಾಗಿ ನಟ ನಾನಿ ಅವರು ಘೋಷಣೆ ಮಾಡಿದ್ದಾರೆ. 

ವಿಶ್ವಕ್ ಸೇನ್ ಮತ್ತು ರುಹಾನಿ ಶರ್ಮಾ ಮುಖ್ಯ ಪಾತ್ರದಲ್ಲಿ ನಟಿಸಿದ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಸೂಪರ್ ಹಿಟ್ ಆಗಿತ್ತು. ಪೊಲೀಸ್ ಅಧಿಕಾರಿಯೊಬ್ಬರು ಯುವತಿಯೊಬ್ಬಳ ನಿಗೂಢ ನಾಪತ್ತೆ ಪ್ರಕರಣದ ತನಿಖೆ ನಡೆಸುವ ಕಥೆಯನ್ನಾಧರಿಸಿದೆ.  ಈ ಚಿತ್ರದ ಸಿಕ್ವೇಲ್ ತೆಗೆಯುವುದಾಗಿ ಬಹಿರಂಗಪಡಿಸಿದ್ದಾರೆ ಮತ್ತು ಅದನ್ನು ಹಿಂದಿಯಲ್ಲಿ ರಿಮೇಕ್ ಮಾಡುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ