ಕ್ರಿಸ್ ಮಸ್ ಹಬ್ಬಕ್ಕೆ ಅಲಂಕಾರ ಮಾಡಲು ಹೋಗಿ ಜೀವ ಕಳೆದುಕೊಂಡ ನಟ ನಿವಿನ್ ಪೌಲಿ ಮೇಕಪ್ ಮ್ಯಾನ್

ಗುರುವಾರ, 24 ಡಿಸೆಂಬರ್ 2020 (13:28 IST)
ಚೆನ್ನೈ : ನಟ ನಿವಿನ್ ಪೌಲಿ ಮಲಯಾಳಂ ಚಿತ್ರರಂಗದ ಪ್ರಮುಖ ನಟ. ಪ್ರಸ್ತುತ ಇವರು  ಟೈಮ್  ಎಂಬ ತಮಿಳು ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಶಾಬು ಎಂಬುವವರು ನಟ ನಿವಿನ್  ಅವರ ಮೇಕಪ್ ಕಲಾವಿದ. 2012ರಿಂದ ಇವರ ಜೊತೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಶಾಬು ಅವರು ಇತ್ತೀಚೆಗೆ ತಮ್ಮ ಮನೆಯಲ್ಲಿ ಕ್ರಿಸ್ ಮಸ್ ಹಬ್ಬದ ಅಲಂಕಾರಗಳನ್ನು ಮಾಡುತ್ತಿದ್ದಾಗ ಕ್ರಿಸ್ ಮಸ್ ಮರದ ಮೇಲ್ಭಾಗದಲ್ಲಿ ನಕ್ಷತ್ರ ಇಡಲು ಹೋಗಿ ಎಡವಿ ಬಿದ್ದಿದ್ದಾರೆ. ಕುಟುಂಬದವರು ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಅವರು ಆಗಲೇ ಸಾವನಪ್ಪಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಇವರು ಹೆಂಡತಿ ಹಾಗೂಇಬ್ಬರು ಮಕ್ಕಳನ್ನು ಅಗಲಿದ್ದಾರೆ, ಅನೇಕ ಚಿತ್ರರಂಗದ ಗಣ್ಯರು ಅವರ ನಿಧನಕ್ಕೆ  ಸಂತಾಪ ಸೂಚಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ