ಜ್ವಾಲಾಮುಖಿಯಂತೆ ಬರುವ ಫುಲ್ಜಾರ್‌ ಸೋಡಾ ಟ್ರೈ ಮಾಡಿದ ನಟ ಶರಣ್, ಹೇಳಿದ್ದೇನು, ಎಲ್ಲಿ ಸಿಗುತ್ತೇ ಗೊತ್ತಾ

Sampriya

ಶನಿವಾರ, 15 ಫೆಬ್ರವರಿ 2025 (17:50 IST)
Photo Courtesy X
ಕನ್ನಡದ ನಟ ಶರಣ್ ಅವರು ಮಂಗಳೂರಿಗೆ ಭೇಟಿ ನೀಡಿದಾಗಲೆಲ್ಲ ಅಲ್ಲಿನ ತಿನಿಸಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಳ್ಳುತಿರುತ್ತಾರೆ.

ಈಚೆಗೆ ಮಂಗಳೂರಿಗೆ ಭೇಟಿ ನೀಡಿದ ಶರಣ್ ಅವರು ಮಂಗಳೂರಿನ ಫೇಮಸ್ ಗೋಳಿಬಜೆಯನ್ನು ಸವಿಯದೆ ಹೀಗೇ ಇರುವುದು ಎಂದು ಬರೆದುಕೊಂಡಿದ್ದರು.

ಇದೀಗ ಮತ್ತೇ ಮಂಗಳೂರಿನ ಕಡೆ ಪ್ರಯಾಣ ಬೆಳೆಸಿರುವ ಶರಣ್ ಅವರು, ಧರ್ಮಸ್ಥಳ ಬಳಿ ಸಿಗುವ ಫುಲ್ಜಾರ್ ಸೋಡಾದ ಟೇಸ್ಟ್‌ಗೆ ಫಿದಾ ಆಗಿದ್ದಾರೆ.  ಈ ಫುಲ್ಜಾರ್ ಸೋಡಾವನ್ನು ಈ ಹಿಂದೆ ನಟಿ ರಚಿತಾ ರಾಮ್ ಅವರು ಕೂಡಾ ಕುಡಿದಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಈ ಜ್ಯೂಸ್‌ ಅನ್ನು ಸವಿಯುವ ವಿಡಿಯೋವನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಶೇರ್ ಮಾಡಿದ್ದಾರೆ.  ಜ್ವಾಲಾಮುಖಿಯಂತೆ ಬರುವ ಈ ತಂಪಾದ ಫುಲ್ಜಾರ್‌ ಸೋಡಾ (Fuljar Soda) ಯಾರ್ ಯಾರು try ಮಾಡಿದ್ದೀರ ಹೇಳಿ? ಶ್ರೀ ಕ್ಷೇತ್ರ ಧರ್ಮಸ್ಥಳದ ದಾರಿಯಲ್ಲಿ ಒಂದೇ ಗುಕ್ಕಿನಲ್ಲಿ ಪ್ರಯಾಣದ ದಾಹ ಮಂಗ ಮಾಯಾ ಎಂದು ಬರೆದುಕೊಂಡಿದ್ದಾರೆ.

ಜ್ವಾಲಾಮುಖಿಯಂತೆ ಬರುವ ಈ ತಂಪಾದ ಫುಲ್ಜಾರ್‌ ಸೋಡಾ (Fuljar Soda) ಯಾರ್ ಯಾರು try ಮಾಡಿದ್ದೀರ ಹೇಳಿ?
ಶ್ರೀ ಕ್ಷೇತ್ರ ಧರ್ಮಸ್ಥಳದ ದಾರಿಯಲ್ಲಿ ಒಂದೇ ಗುಕ್ಕಿನಲ್ಲಿ ಪ್ರಯಾಣದ ದಾಹ ಮಂಗ ಮಾಯಾ ???? pic.twitter.com/cLLtbsoHpT

— Sharaan (@realSharaan) February 15, 2025

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ