ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಹೃದಯಾಘಾತದಿಂದ ಸಾವಪ್ಪಿದ ಬಗ್ಗೆ ಹಿರಿಯ ನಟ ಸುಮನ್ ಕಣ್ಣೀರು ಮಿಡಿದಿದ್ದಾರೆ. ಆಸ್ಪತ್ರೆಯಿಂದ ಅವರು ಪರಿಪೂರ್ಣ ಆರೋಗ್ಯದಿಂದ ಹಿಂತಿರುಗುತ್ತಾರೆ ಎಂದು ಭಾವಿಸಿದ್ದೆವು. ಆದರೆ ಈ ರೀತಿ ಜರುಗಿದ್ದು ತುಂಬಾ ದುಃಖಕರ ಎಂದಿದ್ದಾರೆ. ಅವರು ಮತ್ತು ನಾನು ಚೆನ್ನೈನ ಚರ್ಚ್ ಪಾರ್ಕ್ ಸ್ಕೂಲಲ್ಲಿ ಓದಿದ್ದು.