ನಟ ಸುಶಾಂತ್ ಸಿಂಗ್ ಗೆ ಡ್ರಗ್ ಹವ್ಯಾಸ ಇತ್ತಾ? ನಟಿ ರಿಯಾ ಹೇಳಿದ್ದೇನು?

ಶನಿವಾರ, 29 ಆಗಸ್ಟ್ 2020 (21:37 IST)
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ಕೈಗೆತ್ತಿಕೊಂಡಿರುವ ಸಿಬಿಐ ಈ ಕೇಸ್ ನಲ್ಲಿ ಡ್ರಗ್ ಜಾಲ ಥಳಕು ಹಾಕಿಕೊಂಡಿದೆ ಎನ್ನೋದನ್ನು ಪತ್ತೆ ಮಾಡಿದೆ.

ಈ ನಡುವೆ ಸುಶಾಂತ್ ಸಿಂಗ್ ಗೆಳತಿ ನಟಿ ರಿಯಾ ಚಕ್ರವರ್ತಿಗೆ ಸಿಬಿಐ ಡ್ರಿಲ್ ನಡೆಸಿದ್ದು, ವಿಚಾರಣೆ ನಡೆಸಿದೆ.

ಡ್ರಗ್ಸ್ ಸಂಬಂಧವಾಗಿ ರಿಯಾ ಚಕ್ರವರ್ತಿಯನ್ನು ಪ್ರಶ್ನೆ ಮಾಡಲಾಗಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
  1. ಎಸ್‌ಎಸ್‌ಆರ್(ಸುಶಾಂತ್ ಸಿಂಗ್ ರಜಪೂತ್) ಯಾವ ರೀತಿಯಲ್ಲಾದರೂ ಡ್ರಗ್ ತೆಗೆದುಕೊಳ್ಳುತ್ತಿದ್ದರಾ?
  2. ನೀವು ಡ್ರಗ್ ಸೇವಿಸಿದ್ದೀರಾ?
  3. ಎಸ್‌ಎಸ್‌ಆರ್‌ಗೆ ಎಂದಾದರೂ ರಹಸ್ಯವಾಗಿ ಡ್ರಗ್ ನೀಡಿದ್ದೀರಾ?
  4. ಎಸ್‌ಎಸ್‌ಆರ್ ಎಂದಾದರೂ ಮಿತಿಮೀರಿದ ಪ್ರಮಾಣದಲ್ಲಿ ಡ್ರಗ್ ಸೇವಿಸಿದ್ದರಾ?
  5. ಗೌರವ್ ಆರ್ಯ ಯಾರು?
ಇಂತಹ ಪ್ರಶ್ನೆಗಳನ್ನು ನಟಿ ರಿಯಾ ಚಕ್ರವರ್ತಿಗೆ ಕೇಳಲಾಗಿದೆ ಎನ್ನಲಾಗಿದೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ