ಬಾಲಿವುಡ್ ನಟಿ ಜೆನೆಲಿಯಾ ಡಿಸೋಜಾಗೆ ಅಂಥದ್ದೇನಾಯ್ತು?
ಬಾಲಿವುಡ್ ನಟಿ ಜೆನೆಲಿಯಾ ಡಿಸೋಜಾ ತಮ್ಮ ಹೊಸ ಸುದ್ದಿಯನ್ನು ಟ್ವಿಟ್ ಮಾಡಿ ಹಂಚಿಕೊಂಡಿದ್ದಾರೆ.
ಮೂರು ವಾರಗಳ ಹಿಂದೆ ರೋಗಲಕ್ಷಣವಿಲ್ಲದಿದ್ದರೂ ಕೊರೊನಾ ದೃಢಪಟ್ಟಿತ್ತು. ಸುಮಾರು 21 ದಿನಗಳ ಕಾಲ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿರುವ ನಟಿ ಜೆನೆಲಿಯಾ ಇದೀಗ ಆರೋಗ್ಯವಾಗಿದ್ದಾರೆ.
21 ದಿನಗಳ ಕ್ವಾರಂಟೈನ್ ಬಳಿಕ ಕೊರೊನಾ ವರದಿ ನೆಗೆಟಿವ್ ಬಂದಿದೆ ಎಂದು ಟ್ವಿಟ್ಟರ್ ನಲ್ಲಿ ನಟಿ ಜೆನೆಲಿಯಾ ಬರೆದುಕೊಂಡಿದ್ದಾರೆ.