ನಟ ಸುಶಾಂತ್ ಸಿಂಗ್ ಸಹೋದರಿಯ ಟ್ವಿಟ್ ಭಾರೀ ವೈರಲ್
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ರ ಸಹೋದರಿ ಶ್ವೇತಾ ಸಿಂಗ್ ಕೀರ್ತಿ ಮಾಡಿರುವ ಪೋಸ್ಟ್ ಭಾರೀ ವೈರಲ್ ಆಗುತ್ತಿದೆ.
ಹಿಂದೂ ದೇವತೆಯ ಚಿತ್ರವನ್ನು ಪೋಸ್ಟ್ ಮಾಡಿರುವ ಶ್ವೇತಾ, '' ಸತ್ಯವು ಸಿಂಹದಂತಿದೆ; ನೀವು ಅದನ್ನು ರಕ್ಷಿಸಬೇಕಾಗಿಲ್ಲ. ಅದನ್ನು ಸಡಿಲಗೊಳಿಸಲಿ; ಅದು ತನ್ನನ್ನು ತಾನು ರಕ್ಷಿಸಿಕೊಳ್ಳುತ್ತದೆ ... #JusticeForSushantSinghRajput '' ಎಂದು ಟ್ಟಿಟ್ ನಲ್ಲಿ ಬರೆದುಕೊಂಡಿದ್ದಾರೆ.
ಈ ಪೋಸ್ಟ್ ಗೆ ಸುಶಾಂತ್ ಅಭಿಮಾನಿಗಳು ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.