ನಟಿ ರಿಯಾ ಚಕ್ರವರ್ತಿಗೆ ಮತ್ತೊಂದು ಶಾಕ್ : ಡ್ರಗ್ ಲಿಂಕ್ ನಲ್ಲಿ ಇದ್ದವರೆಷ್ಟು?

ಬುಧವಾರ, 2 ಸೆಪ್ಟಂಬರ್ 2020 (17:20 IST)
ಬಾಲಿವುಡ್ ನಟ ಸುಶಾಂತ ಸಿಂಗ್ ರಜಪೂತ್ ಸಾವಿನ ಕುರಿತು ಒಂದೆಡೆ ಸಿಬಿಐ ಮತ್ತೊಂದೆಡೆ ಎನ್ ಸಿ ಬಿ ತನಿಖೆ ಚುರುಕುಗೊಳಿಸಿದ್ದು, ಡ್ರಗ್ ಪೆಡ್ಲರ್ ಒಬ್ಬನನ್ನು ಬಂಧನ ಮಾಡಲಾಗಿದೆ.

ಬಂಧಿತ ಡ್ರಗ್ ಪೆಡ್ಲರ್ ನನ್ನು ಜೈದ್ ವಿಲಾತ್ರಾ ಎಂದು ಗುರುತಿಸಲಾಗಿದ್ದು, ಬಂಧಿತನಿಂದ 9.55 ಲಕ್ಷ ರೂ. ನಗದು ವಶಕ್ಕೆ ಪಡೆದುಕೊಳ್ಳಲಾಗಿದೆ.

ಬಂಧಿತ ಆರೋಪಿಯು ಬಾಲಿವುಡ್  ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ಆರೋಪಿ ರಿಯಾ ಚಕ್ರವರ್ತಿಯ ಸಹೋದರ ಶೋಯಿಕ್ ಅವರೊಂದಿಗೆ ಸಂಪರ್ಕ ಹೊಂದಿದ್ದನು.

ಎನ್ ಸಿ ಬಿ ತನಿಖೆ ವೇಳೆ, ರಿಯಾ  ಚಕ್ರವರ್ತಿಯ ಸಹೋದರ ಶೋಯಿಕ್, ಸ್ಯಾಮ್ಯುಯೆಲ್, ಜೈದ್ ವಿಲಾತ್ರಾ,  ಬಸೀತ್, ಸೂರ್ಯದೀಪ್ ಎಂಬುವರು ಸಂಪರ್ಕದಲ್ಲಿದ್ದರು ಎನ್ನಲಾಗಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ