ಕಮಲ್ ಹಾಸನ್ ಜೊತೆ ನಟಿಸುವ ಅವಕಾಶ ಪಡೆಯುತ್ತಾರಾ ನಟ ವಿಜಯ್ ಸೇತುಪತಿ?

ಬುಧವಾರ, 7 ಏಪ್ರಿಲ್ 2021 (11:45 IST)
ಚೆನ್ನೈ : ಉಂಗಲ್ ನಾನ್ ಚಿತ್ರದ ಬಳಿಕ ನಟ ವಿಜಯ್ ಸೇತುಪತಿ ಅವರು ಸ್ಟಾರ್ ನಟ ಕಮಲ್ ಹಾಸನ್ ಅವರೊಂದಿಗೆ ಕೆಲಸ ಮಾಡಲು ಇನ್ನೊಂದು ಅವಕಾಶ ನೀಡುವಂತೆ ವಿನಂತಿಸಿಕೊಂಡಿದ್ದರು. ಇದೀಗ ಅವರ  ಕೋರಿಕೆ ಈಡೇರಲಿದೆ ಎನ್ನಲಾಗಿದೆ.

ಲೋಕೇಶ್ ಕನಗರಾಜ್ ಅವರ ನಿರ್ದೇಶನದ ಕಮಲ್ ಹಾಸನ್ ಅಭಿನಯದ ಮುಂಬರುವ ‘ವಿಕ್ರಮ್’ ಚಿತ್ರದಲ್ಲಿ ನಟಿಸುವ ಅವಕಾಶ ವಿಜಯ್ ಸೇತುಪತಿ ಅವರಿಗೆ ಸಿಗಲಿದೆ ಎಂಬ ವದಂತಿ ಕೇಳಿಬರುತ್ತಿದೆ. ವಿಕ್ರಮ್ ಚಿತ್ರದಲ್ಲಿ ಖಳನಾಯಕನ ಪಾತ್ರವನ್ನು ರಾಘವ ಲಾರೆನ್ಸ್ ಮಾಡಲಿದ್ದಾರೆ ಎನ್ನಲಾಗಿತ್ತು. ಆದರೆ ಅವರು ಈ ಪಾತ್ರದಿಂದ ಹೊರಗುಳಿದ ಕಾರಣ ಲೋಕೇಶ್ ಕನಗರಾಜ್ ಅವರು ವಿಜಯ್ ಸೇತುಪತಿ ಅವರೊಂದಿಗೆ ಮಾತುಕತೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಈಗಾಗಲೇ ಲೋಕೇಶ್ ಕನಗರಾಜ್ ಅವರ ಮಾಸ್ಟರ್ ಚಿತ್ರದಲ್ಲಿ ಖಳನಾಯಕನಾಗಿ ಮಿಂಚಿದ ವಿಜಯ್ ಸೇತುಪತಿ ಅವರಿಗೆ ಈ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ