ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ ಜೊತೆ ಎಂಗೇಜ್ ಆದ ನಟ ವಿಷ್ಣು ವಿಶಾಲ್

ಬುಧವಾರ, 9 ಸೆಪ್ಟಂಬರ್ 2020 (10:18 IST)
ಚೆನ್ನೈ : ತಮಿಳು ನಟ ವಿಷ್ಣು ವಿಶಾಲ್ ಮತ್ತು ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ ನಡುವೆ ಲವ್ವಿ-ಡುವ್ವಿ ಶುರುವಾಗಿದೆ ಎಂದು ಹೇಳಲಾಗುತ್ತಿತ್ತು. ಆದರೆ ಇದೀಗ ಅವರಿಬ್ಬರು ಎಂಗೇಜ್ ಆಗಿದ್ದಾರೆ ಎಂಬ ವಿಚಾರ ತಿಳಿದುಬಂದಿದೆ.

ಇಂದು ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ ಅವರಿಗೆ 37ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನಲೆಯಲ್ಲಿ ಗೆಳತಿಗೆ ಸರ್ಪ್ರೈಸ್ ನೀಡಲು ನಟ ವಿಷ್ಣು ವಿಶಾಲ್ ಅವರು ಜ್ವಾಲಾ ಗುಟ್ಟಾ ಅವರ ಜೊತೆ ಎಂಗೇಜ್ ಮೆಂಟ್ ಮಾಡಿಕೊಂಡ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

ಇವರಿಬ್ಬರು ಪರಸ್ಪರ ಉಂಗುರ ಬದಲಿಸಿಕೊಂಡ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ನೆಟ್ಟಿಗರು ನವಜೋಡಿಗೆ ಶುಭಕೋರಿದ್ದಾರೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ