ನಟ ಯಶ್ ಹತ್ಯೆಗೆ ಸಂಚು ; ಕುಖ್ಯಾತ ರೌಡಿ ಸೈಕಲ್ ರವಿಯಿಂದ ಶಾಕಿಂಗ್ ಹೇಳಿಕೆ

ಗುರುವಾರ, 12 ಜುಲೈ 2018 (14:23 IST)
ಬೆಂಗಳೂರು : ಕುಖ್ಯಾತ ರೌಡಿ ಸೈಕಲ್ ರವಿ ಸ್ಯಾಂಡಲ್ ವುಡ್ ನ ಖ್ಯಾತ ನಟ ರಾಕಿಂಗ್ ಸ್ಟಾರ್ ಯಶ್ ಕುರಿತಾದ ಶಾಕಿಂಗ್ ವಿಚಾರವೊಂದನ್ನು  ತಿಳಿಸಿದ್ದಾನೆ.


ಜೂನ್ 27ರಂದು ಸಿಸಿಬಿ ಪೊಲೀಸರ ಗುಂಡೇಟು ತಿಂದು ಬಂಧನಕ್ಕೊಳಗಾಗಿರುವ ಈತ ವಿಚಾರಣೆಯ ವೇಳೆ 2ವರ್ಷಗಳ ಹಿಂದೆ ಸ್ಯಾಂಡಲ್ ವುಡ್ ನ ಖ್ಯಾತ ನಟ ರಾಕಿಂಗ್ ಸ್ಟಾರ್ ಯಶ್ ಅವರ  ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂಬ ವಿಚಾರವನ್ನು ಬಹಿರಂಗಪಡಿಸಿದ್ದಾನೆ. ಬೆಂಗಳೂರಿನ ಹೊರ ವಲಯದಲ್ಲಿ ನಡೆದಿದ್ದ ಪಾರ್ಟಿಯಲ್ಲಿ ಯಶ್ ಹತ್ಯೆಯ ವಿಚಾರ ಮಾತುಕತೆ ನಡೆದಿತ್ತು. ಪಾರ್ಟಿ ಬಳಿಕ ಸಂಚು ರೂಪಿಸಲು ಯಾರೂ ಮುಂದಾಗಿರಲಿಲ್ಲ ಆದರೆ ಮತ್ತೊಬ್ಬ ರೌಡಿ ಕೋದಂಡ ಎಂಬಾತ ಈ ವಿಚಾರದಲ್ಲಿ ಆಸಕ್ತಿ ವಹಿಸಿದ್ದನೆಂದು ತಿಳಿಸಿದ್ದಾನೆ.


ಹಾಗೇ ಈ ವಿಚಾರ ತಿಳಿದ ತಕ್ಷಣ ಯಶ್​​​​​​ ಮತ್ತು ನಿರ್ಮಾಪಕ ಜಯಣ್ಣ ಪೊಲೀಸ್ ಕಮೀಷನರ್ ಕಚೇರಿಗೆ ಬಂದು ಮೌಖಿಕ ದೂರು ಸಲ್ಲಿಸಿದ್ದರೆಂದು ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ