ಈ ನಟ –ನಟಿಯ ಜೊತೆ ನಟಿಸುವ ಸಮಂತಾ ಕನಸು ನನಸಾಗಲಿದೆಯಂತೆ

ಶುಕ್ರವಾರ, 12 ಫೆಬ್ರವರಿ 2021 (12:50 IST)
ಚೆನ್ನೈ : ಸ್ಟಾರ್ ನಟಿ ಸಮಂತಾ ಅವರು ಇತ್ತೀಚೆಗೆ ನಟ ವಿಜಯ್ ಸೇತುಪತಿ ಹಾಗೂ ನಟಿ ನಯನತಾರಾ ಅವರ ಜೊತೆ ನಟಿಸುವ ಹಂಬಲವನ್ನು ವ್ಯಕ್ತಪಡಿಸಿದ್ದರು. ಇದೀಗ ಅವರ ಕನಸು ನನಸಾಗುವ ಹಂತಕ್ಕೆ ಬಂದಿದೆ ಎನ್ನಲಾಗಿದೆ.

ಹೌದು. ನಟಿ ಸಮಂತಾ ಅವರಿಗೆ ವಿಜಯ್ ಸೇತುಪತಿ ಮತ್ತು ನಯನತಾರಾ ಅವರ ಜೊತೆ ಏಕಕಾಲದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ವಿಘ್ನೇಶ್ ಶಿವನ್ ನಿರ್ದೇಶಿಸಿ, ನಿರ್ಮಿಸುತ್ತಿರುವ  ಮುಂಬರುವ ಈ ತಮಿಳು ಚಿತ್ರದಲ್ಲಿ ವಿಜಯ್ ಸೇತುಪತಿ ನಾಯಕನಾಗಿ ಹಾಗೂ ನಯನತಾರ ಹಾಗೂ ಸಮಂತಾ ನಾಯಕಿಯಾಗಿ ನಟಿಸಲಿದ್ದಾರಂತೆ. ಇದು ತ್ರಿಕೋನ ಪ್ರೇಮಕಥೆಯಾಗಿದೆ ಎಂಬುದಾಗಿ ತಿಳಿದುಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ