ಕೊರೊನಾ ಸೋಂಕಿಗೆ ಒಳಗಾದ ತಮಿಳು ನಟ ಸೂರ್ಯ

ಸೋಮವಾರ, 8 ಫೆಬ್ರವರಿ 2021 (10:47 IST)
ಚೆನ್ನೈ : ತಮಿಳು ನಟ ಸೂರ್ಯ ಅವರು ಕೊರೊನಾ ಸೋಂಕಿಗೆ ಒಳಗಾಗಿದ್ದು, ಅಭಿಮಾನಿಗಳು ಶಾಕ್ ಗೆ ಒಳಗಾಗಿದ್ದಾರೆ.

ನಟ ಸೂರ್ಯ ಕೊರೊನಾ ಪರೀಕ್ಷೆಗೆ ಒಳಪಟ್ಟಿದ್ದಾರೆ. ಆ ವೇಳೆ ಅವರಿಗೆ ಕೊರೊನಾ ಇರುವುದು ತಿಳಿದುಬಂದಿದೆ. ಈ ವಿಚಾರವನ್ನು ಟ್ವೀಟರ್ ನಲ್ಲಿ ಬಹಿರಂಗಪಡಿಸಿದ ನಟ ಸೂರ್ಯ ಅವರು, ನಾನು ಕೊರೊನಾದಿಂದ ಬಳಲುತ್ತಿದ್ದೇನೆ. ಪ್ರಸ್ತುತ ನಾನು ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದೇನೆ. ಈಗ ನಾನು ಆರೋಗ್ಯವಾಗಿದ್ದೇನೆ ಎಂದು ತಿಳಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಅಭಿಮಾನಿಗಳು ಶೀಘ್ರದಲ್ಲಿಯೇ ಗುಣಮುಖರಾಗಿ ಎಂದು ಹಾರೈಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ