ನಟಿ ಆವಂತಿಕಾ ಶೆಟ್ಟಿ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಹೊಸ ಟ್ವಿಸ್ಟ್
ಭಾನುವಾರ, 4 ಜೂನ್ 2017 (12:03 IST)
ಲೈಂಗಿಕ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದ್ದ ನಟಿ ಆವಂತಿಕಾ ಶೆಟ್ಟಿ ಪ್ರಕರಣಕ್ಕೆ ಇದೀಗ ಹೊಸ ಟ್ವಿಸ್ಟ್ ದೊರೆತಿದೆ. ನಟಿ ಆವಂತಿಕಾ ಶೆಟ್ಟಿಗೆ ಯಾವುದೇ ಲೈಂಗಿಕ ಕಿರುಕುಳ ನೀಡಿಲ್ಲ ಎಂದು ಚಿತ್ರ ನಿರ್ಮಾಪಕ ಸುರೇಶ್ ಹೇಳಿದ್ದಾರೆ.
ರಂಗಿತರಂಗ ಚಿತ್ರದಲ್ಲಿ ನಟಿಸಿದ್ದ ಆವಂತಿಕಾ, ನನಗೆ ಲೈಂಗಿಕ ಕಿರುಕುಳ ನೀಡಲಾಗುತ್ತಿದೆ ಎಂದು ಸಾಮಾಜಿಕ ಅಂತರ್ಜಾಲ ತಾಣದಲ್ಲಿ ಪೋಸ್ಟ್ ಮಾಡಿದ್ದರು.
ನಾನು ಮುಂಬೈಗೆ ತೆರಳಿ ಅವರೊಂದಿಗೆ ಚರ್ಚೆ ನಡೆಸಿದ್ದೇನೆ. ಸಿನೆಮಾದಲ್ಲಿ ನಟನೆ ಮಾಡಲು ಅವರಿಗೆ ಆಸಕ್ತಿಯಿರಲಿಲ್ಲ. ಸಾಂಗ್ ಶೂಟಿಂಗ್ ವೇಳೆ ಕಾಸ್ಟೂಮ್ ಬದಲಾವಣೆಯಿರುತ್ತದೆ. ಆದರೆ, ಅನಗತ್ಯವಾಗಿ ವಿಳಂಬ ಮಾಡುತ್ತಿದ್ದರು ಎಂದು ಚಿತ್ರದ ನಿರ್ಮಾಪಕ ಸುರೇಶ್ ಹೇಳಿದ್ದಾರೆ.
ನಟಿ ಆವಂತಿಕಾ ಶೆಟ್ಟಿ ಸರಿಯಾಗಿ ಸೆಟ್‌ಗೆ ಬರುತ್ತಿರಲಿಲ್ಲ. ಶೂಟಿಂಗ್ ಲೋಕೇಶನ್‌ಗೆ ವಿಳಂಬವಾಗಿ ಆಗಮಿಸುತ್ತಿದ್ದರು. ನೃತ್ಯ ನಿರ್ದೇಶಕರೊಂದಿಗೂ ಕಿರಿಕ್ ಮಾಡಿಕೊಂಡಿದ್ದರು. ಲೈಂಗಿಕ ಕಿರುಕುಳ ಆರೋಪದಲ್ಲಿ ಸತ್ಯಾಂಶವಿಲ್ಲ ಎಂದು ಚಿತ್ರದ ನಿರ್ಮಾಪಕ ಸುರೇಶ್ ಮಾಹಿತಿ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.