ರಾಕಿಂಗ್ ಸ್ಟಾರ್ ಯಶ್ ‘ಮೊದಲ ಸಲಾ’ ನಾಯಕಿ ನಟಿ ಭಾಮಾ ದಾಂಪತ್ಯದಲ್ಲಿ ಬಿರುಕು?

ಶನಿವಾರ, 21 ಜನವರಿ 2023 (09:00 IST)
ಕೊಚ್ಚಿ: ರಾಕಿಂಗ್ ಸ್ಟಾರ್ ಯಶ್ ಅವರ ಮೊದಲ ಸಲಾ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಮಲಯಾಳಂ ಮೂಲದ ನಟಿ ಭಾಮಾ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಹರಿದಾಡುತ್ತಿದೆ.

2020 ರಲ್ಲಿ ಭಾಮಾ ಉದ್ಯಮಿ ಅರುಣ್ ಅವರನ್ನು ಮದುವೆಯಾಗಿದ್ದರು. ಈ ದಂಪತಿಗೆ ಓರ್ವ ಪುತ್ರಿಯೂ ಇದ್ದಾಳೆ. ಮದುವೆ ಬಳಿಕ ಭಾಮಾ ಚಿತ್ರರಂಗದಿಂದ ಸಂಪೂರ್ಣವಾಗಿ ದೂರವಾಗಿದ್ದರು.

ಇದೀಗ ಭಾಮಾ ತಮ್ಮ ಸೋಷಿಯಲ್ ಮೀಡಿಯಾ ಪುಟದಿಂದ ಪತಿಯ ಜೊತೆಗಿರುವ ಫೋಟೋಗಳನ್ನು ಡಿಲೀಟ್ ಮಾಡಿದ್ದು, ಮಗಳ ಎರಡನೇ ವರ್ಷದ ಹುಟ್ಟುಹಬ್ಬದ ವಿಡಿಯೋವನ್ನೂ ಹಂಚಿಕೊಂಡಿಲ್ಲ. ಈ ಎಲ್ಲಾ ಕಾರಣಕ್ಕೆ ಅವರ ದಾಂಪತ್ಯದಲ್ಲಿ ಬಿರುಕು ಮೂಡಿರಬಹುದು ಎಂಬ ಸುದ್ದಿ ಹರಿದಾಡುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ