ಭಾವನಾ ಎಂದರೆ ಯಾರಿಗೆ ಆಗಲಿ ಯಾವ ಭಾವನಾ ಅನ್ನೋ ಡೌಟು ಬರುತ್ತೆ. ನಾವು ಮಾತನಾಡುತ್ತಿರುವುದು ’ಜಾಕಿ’, ವಿಷ್ಣುವರ್ಧನ, ರೋಮಿಯೋ, ಟೋಪಿವಾಲಾ, ಮುಕುಂದ ಮುರಾರಿ ಭಾವನಾ ಬಗ್ಗೆ. ಈ ಮಲ್ಲು ಬೆಡಗಿ ಕನ್ನಡದ ಸಾಕಷ್ಟು ಚಿತ್ರಗಳಲ್ಲಿ ಬಣ್ಣಹಚ್ಚಿದ್ದಾರೆ. ಒಂದಷ್ಟು ದಿನ ಟಾಲಿವುಡ್‍ನಲ್ಲೂ ಕಾಣಿಸಿಕೊಂಡರು.
ಮುಂದಿನ ವರ್ಷ ಏಪ್ರಿಲ್‌ನಲ್ಲಿ ಮದುವೆ ಎನ್ನಲಾಗಿದೆ. ತನ್ನ ಚಿರಕಾಲದ ಪ್ರೇಮಿಯ ಕೈಹಿಡಿಯಲಿದ್ದಾರೆ ಭಾವನಾ. ವಿಶೇಷ ಎಂದರೆ ಮದುವೆಯನ್ನು ಆಡಂಬರವಾಗಿ ಮಾಡಿಕೊಳ್ಳದೆ ತುಂಬಾ ಸಿಂಪಲ್ ಆಗಿ ಮಾಡಿಕೊಳ್ಳಲಿದ್ದಾರೆ ಎಂಬುದು. ಕೇವಲ ಬಂಧುಬಳಗವನ್ನು ಆಹ್ವಾನಿಸಿ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಳ್ಳಲಿದ್ದಾರಂತೆ. ಸದ್ಯಕ್ಕೆ ಭಾವನಾ ಕನ್ನಡದ ಚೌಕ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.