ಪತಿ ವಿರುದ್ಧ ಪೊಲೀಸರಿಗೆ ದೂರು ನೀಡಿದ ಸ್ಯಾಂಡಲ್ ವುಡ್ ನಟಿ
ಪ್ರೀತಿಸಿ ಮದುವೆಯಾಗಿದ್ದ ಬಾಲಾಜಿ ಪೋತ್ ರಾಜ್ ವಿರುದ್ಧ ನಟಿ ಚೈತ್ರಾ ದೂರು ನೀಡಿದ್ದಾರೆ. ಅಕ್ರಮ ಸಂಬಂಧವಿಟ್ಟುಕೊಂಡಿದ್ದನ್ನು ಪ್ರಶ್ನಿಸಿದ್ದಕ್ಕೆ ಚೈತ್ರಾಗೆ ಬಾಲಾಜಿ ಚೆನ್ನಾಗಿ ಥಳಿಸಿದ್ದಾನೆ ಎನ್ನಲಾಗಿದೆ. ಅಷ್ಟೇ ಅಲ್ಲ, ಮಾನಸಿಕ, ದೈಹಿಕ ಹಿಂಸೆ ನೀಡಿದ ಹಿನ್ನಲೆಯಲ್ಲಿ ಚೈತ್ರಾ ಪೊಲೀಸರಿಗೆ ದೂರು ನೀಡಿದ್ದಾರೆ.
ಖುಷಿ ಎಂಬ ಸಿನಿಮಾದಲ್ಲಿ ಚೈತ್ರಾ ನಾಯಕಿ ನಟಿಯಾಗಿ ಅಭಿನಯಿಸಿದ್ದರು. ಅದಲ್ಲದೆ, ಒಂದು ಧಾರವಾಹಿ ನಿರ್ಮಿಸುವ ಕೆಲಸಕ್ಕೂ ಕೈ ಹಾಕಿದ್ದರು. ಆದರೆ ಇದರಲ್ಲಿ ಬಂದ ಹಣವನ್ನು ಪತಿ ತನಗೆ ಕೊಡದೇ ವಂಚಿಸಿದ್ದನೆಂದು ದೂರಿನಲ್ಲಿ ಆಕೆ ಹೇಳಿದ್ದಾರೆ.