ಹೆಸರನ್ನೇ ಬದಲಿಸಿಕೊಂಡ ಡಾ. ರಾಜ್ ಮೊಮ್ಮಗ
ಇನ್ನು ಮುಂದೆ ಇವರನ್ನು ಗುರು ರಾಜ್ ಕುಮಾರ್ ಎಂದು ಕರೆಯುವಂತಿಲ್ಲ. ಅವರ ಹೆಸರೀಗ ಯುವರಾಜ್ ಕುಮಾರ್ ಎಂದು ಬದಲಾಗಿದೆ. ಈ ಬಗ್ಗೆ ಫೇಸ್ ಬುಕ್ ನಲ್ಲಿ ಅವರು ಬರೆದುಕೊಂಡಿದ್ದಾರೆ.
ತಾತ ಮುತ್ತುರಾಜ್ ಅವರಿಂದ ಆದ ಹೆಸರು ಬದಲಾವಣೆ ಗುರುವನ್ನು ಯುವರಾಜ್ ಕುಮಾರ್ ಮಾಡಿದೆ ಎಂದು ಬರೆದುಕೊಂಡಿದ್ದಾರೆ. ಕೆಲವರು ಈ ಬದಲಾವಣೆಯನ್ನು ಮೆಚ್ಚಿಕೊಂಡಿದ್ದರೆ, ಇನ್ನು ಕೆಲವರು ಬೇಸರಿಸಿಕೊಂಡಿದ್ದಾರೆ.