ಅನುಮಾನಾಸ್ಪದ ರೀತಿಯಲ್ಲಿ ನಟಿ ಸಾವು, ಪೊಲೀಸ್ ಸಂಬಂಧ ಶಂಕೆ

ಶನಿವಾರ, 21 ಜನವರಿ 2017 (13:23 IST)
ಹಿಮಾಚಲ ಸಿನಿಮಾಗಳಿಗೆ ಸಂಬಂಧಿಸಿದ 24 ವರ್ಷದ ನಟಿ ರಿಚಾ ಧಿಮಾನ್ ಅನುಮಾನಾಸ್ಪದ ರೀತಿಯಲ್ಲಿ ಸಾವಪ್ಪಿದ್ದಾರೆ. ಬಾಡಿಗೆಗೆ ಇರುವ ಮನೆಯಲ್ಲಿ ಆಕೆ ಶುಕ್ರವಾರ ಶವವಾಗಿ ಪತ್ತೆಯಾಗಿದ್ದಾರೆ. ಆಕೆಯ ಸಾವಿನ ಹಿಂದೆ ಒಬ್ಬ ಕಾನಿಸ್ಟೇಬಲ್ ಇರುವುದಾಗಿ ಆರೋಪಗಳು ಕೇಳಿಬರುತ್ತಿವೆ. 
 
ಈ ಮೂಲಕ ಆಕೆಯ ಸಾವು ಈಗ ವಿವಾದವಾಗಿ ಪರಿಣಮಿಸಿದೆ. ರಿಚಾ ಬಾಗಿಲು ತೆಗೆಯುತ್ತಿಲ್ಲ ಎಂಬ ಸುದ್ದಿ ತಿಳಿಸು ಸ್ಥಳಕ್ಕೆ ಆಗಮಿಸಿದ ಪೊಲೀಸರಿಗೆ ಆಕೆಯ ಮೃತಪಟ್ಟಿರುವುದು ಗೊತ್ತಾಗಿದೆ. ಒಳಗಡೆಯಿಂದ ಚಿಲಕ ಹಾಕಿಕೊಂಡಿದ್ದು, ಕಡೆಗೆ ಬಾಗಿಲು ಹೊಡೆದು ಪೊಲೀಸರು ಒಳಗೆ ಪ್ರವೇಶಿಸಬೇಕಾಯಿತು. 
 
ಒಳಗಡೆ ಸೀಲಿಂಗ್ ಫ್ಯಾನಿಗೆ ನೇತಾಡುವ ಸ್ಥಿತಿಯಲ್ಲಿ ರಿಚಾ ಇದ್ದರು. ಘಟನಾ ಸ್ಥಳದಲ್ಲಿ ಡೆತ್ ನೋಟ್ ಸಿಕ್ಕಿದೆ. ಅದರಲ್ಲಿ ಕಾನಿಸ್ಟೇಬಲ್ ಒಬ್ಬರ ಹೆಸರು ಬರೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರಿಬ್ಬರ ನಡುವಿನ ಸಂಬಂಧವೇ ಈ ಸಾವಿಗೆ ಕಾರಣ ಎನ್ನಲಾಗಿದೆ. ಕೇಸು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 
 
ಈ ನಟಿಗೆ ಸೋಷಿಯಲ್ಲ್ ಮೀಡಿಯಾದಲ್ಲಿ ಆ ರಾಜ್ಯದಲ್ಲಿ 40 ಸಾವಿರ ಮಂದಿ ಫಾಲೋಯರ್ಸ್ ಇದ್ದಾರೆ. ಪೊಲೀಸರು ತನಿಖೆ ಮೇಲೆ  ನಮಗೆ ನಂಬಿಕೆ ಇಲ್ಲವೆಂದೂ, ಗಂಭೀರವಾಗಿ ತನಿಖೆ ನಡೆಸಬೇಕೆಂದು ನಟಿ ತಂದೆತಾಯಿ ಸಚಿವ ಜಿಎಸ್ ಬಾಲಿಯನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ