ಡ್ರಗ್ ಕೇಸ್ ನಲ್ಲಿ ನಟಿ ಕಂಗನಾ ರಣಾವತ್ ಗೆ ನೋಟಿಸ್ ?

ಗುರುವಾರ, 24 ಸೆಪ್ಟಂಬರ್ 2020 (22:28 IST)
ಬಾಲಿವುಡ್ ನಲ್ಲಿನ ಡ್ರಗ್ಸ್ ಕೇಸ್ ಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಎನ್ ಸಿ ಬಿ ವಿರುದ್ಧ ನಟಿ ನಗ್ಮಾ ತೀವ್ರ ಅಸಮಧಾನ ಹೊರಹಾಕಿದ್ದಾರೆ.

ಪ್ರಮುಖ ನಟ, ನಟಿಯರ ವಾಟ್ಸಪ್ ಚಾಟ್ ಗಳನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿ ಅವರ ಗೌರವ ಹಾಳು ಮಾಡುವುದೇ ಎನ್ ಸಿ ಬಿ ಕೆಲಸವೇ ಎಂದು ನಟಿ ನಗ್ಮಾ ಕೇಳಿದ್ದಾರೆ.

ತಾನು ಈ ಮೊದಲು ಡ್ರಗ್ಸ್ ಸೇವಿಸುತ್ತಿದ್ದೆ ಎಂದು ನಟಿ ಕಂಗನಾ ರಣಾವತ್ ಒಪ್ಪಿಕೊಂಡಿದ್ದಾರೆ.

ಹೀಗಾಗಿ ಎನ್ ಸಿ ಬಿಯು ಕಂಗನಾ ರಣಾವತ್ ಗೆ ನೋಟಿಸ್ ಜಾರಿಮಾಡಬೇಕೆಂದು ಒತ್ತಾಯ ಮಾಡಿದ್ದಾರೆ.

ನಟಿ ನಗ್ಮಾ ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡಿದ್ದು, ಕೈ ಪಡೆಯ ನಾಯಕಿಯಾಗಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ