ನಟ ಸುಶಾಂತ್ ಸಿಂಗ್ ಗೆಳತಿಗೆ ಜೈಲ್? ಬೇಲ್? ಯಾವುದು ಫಿಕ್ಸ್
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ರಿಯಾ ಚಕ್ರವರ್ತಿಗೆ ಜೈಲು ವಾಸ ಮುಂದುವರಿಯುತ್ತಾ? ಬೇಲ್ ಸಿಗುತ್ತಾ ಅನ್ನೋ ಪ್ರಶ್ನೆ ಕಾಡುತ್ತಿದೆ.
ರಿಯಾ ಚಕ್ರವರ್ತಿ ಮತ್ತು ಆಕೆಯ ಸಹೋದರ ಶೋಯಿಕ್ ಬಾಂಬೆ ಹೈಕೋರ್ಟ್‌ನಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರು ಮತ್ತು ಅವರ ಅರ್ಜಿಯನ್ನು ಇಂದು ವಿಚಾರಣೆ ನಡೆಸಬೇಕಿತ್ತು.
ಆದರೆ, ಮುಂಬೈ ನಗರದಲ್ಲಿ ಭಾರಿ ಮಳೆಯಿಂದಾಗಿ ವಿಚಾರಣೆ ನಡೆಯದಿರಬಹುದು ಎಂದು ಆಕೆಯ ವಕೀಲ ಸತೀಶ್ ಮನ್‌ಶಿಂದೆ ಹೇಳಿದ್ದಾರೆ.
"ಮುಖ್ಯ ನ್ಯಾಯಮೂರ್ತಿ ಇಂದು ಬಾಂಬೆ ಹೈಕೋರ್ಟ್‌ಗೆ ರಜಾದಿನವನ್ನು ಘೋಷಿಸಿದ್ದಾರೆ ಮತ್ತು ಇಂದಿನ ವಿಚಾರಣೆಯನ್ನು ಸೆಪ್ಟೆಂಬರ್ 24 ರಂದು ನಡೆಸಲಾಗುವುದು" ಎಂದು ರಿಯಾ ಅವರ ವಕೀಲರು ಹೇಳಿದ್ದಾರೆ.