ಜೂನಿಯರ್ ಎನ್ ಟಿಆರ್ 30ನೇ ಚಿತ್ರದಲ್ಲಿ ನಟಿಸಲು ಒಪ್ಪಿಕೊಳ್ತಾರಾ ನಟಿ ಕೃತಿ ಶೆಟ್ಟಿ?

ಶನಿವಾರ, 13 ಫೆಬ್ರವರಿ 2021 (11:11 IST)
ಹೈದರಾಬಾದ್ : ಜೂನಿಯರ್ ಎನ್ ಟಿಆರ್ ಅವರ 30ನೇ ಚಿತ್ರವನ್ನು ನಿರ್ದೇಶಕ ತ್ರಿವಿಕ್ರಮ್ ನಿರ್ದೇಶಿಸಲಿದ್ದಾರೆ. ಇದೀಗ  ‘ಉಪ್ಪೆನಾ’ ಚಿತ್ರದಲ್ಲಿ ನಟಿಸಿದ ಕೃತಿ ಶೆಟ್ಟಿ ಅವರನ್ನು ಖ್ಯಾತ ನಟ ಜೂನಿಯರ್ ಎನ್ ಟಿಆರ್ ಅವರ 30ನೇ ಚಿತ್ರಕ್ಕಾಗಿ ನಿರ್ದೇಶಕ ತ್ರಿವಿಕ್ರಮ್ ಆಯ್ಕೆ ಮಾಡುವ ಯೋಜನೆ ಮಾಡಿದ್ದಾರೆ ಎನ್ನಲಾಗಿದೆ.

ಈಗಾಗಲೇ ಈ ಚಿತ್ರಕ್ಕೆ ಮುಖ್ಯ ನಾಯಕಿಯಾಗಿ ಬಾಲಿವುಡ್ ನಟಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದೀಗ 2ನೇ ನಾಯಕಿಯನ್ನಾಗಿ ಟಾಲಿವುಡ್ ನಟಿ ಕೃತಿ ಶೆಟ್ಟಿ ಅವರನ್ನು ಆಯ್ಕೆ ಮಾಡುವ ಯೋಜನೆಯಲ್ಲಿದ್ದಾರೆ ಎನ್ನಲಾಗಿದೆ. ನಾಯಕಿಯ ಪಾತ್ರಕ್ಕಾಗಿ ಆಫರ್ ಗಳು ಬರುತ್ತಿರುವಾಗ 2ನೇ ನಾಯಕಿಯ ಪಾತ್ರಕ್ಕೆ ಕೃತಿ ಒಪ್ಪುತ್ತಾರೆಯೇ? ಅಥವಾ ಸ್ಟಾರ್ ನಟನ ಜೊತೆ ನಟಿಸಲು ಒಪ್ಪಿಗೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ