ಸ್ವದೇಶಕ್ಕೆ ಬಂದಿಳಿದ ನಟಿ ಮಾನ್ಯ, ಸ್ನೇಹಿತರ ಜತೆ ಹಳೆ ದಿನಗಳ ಮೆಲುಕು

Sampriya

ಸೋಮವಾರ, 5 ಆಗಸ್ಟ್ 2024 (20:15 IST)
Photo Courtesy X
ಬೆಂಗಳೂರು: 'ವರ್ಷ' ಸಿನಿಮಾದಲ್ಲಿ ತುಂಟ ಹುಡುಗಿಯಾಗಿ,  ಶಾಸ್ತ್ರಿ ಸಿನಿಮಾದಲ್ಲಿ ರೌಡಿ ಬೇಬಿಯಾಗಿ ಕನ್ನಡಿಗರ ಮನಸ್ಸನ್ನು ಗೆದ್ದಿರುವ ಮಾನ್ಯ ಅವರು ಸದ್ಯ ಅಮೆರಿಕದಲ್ಲಿ ನೆಲೆಸಿದ್ದಾರೆ. ಇದೀಗ ಮಗಳು ಓಮಿಕಾ ಹಾಗೂ ತಾಯಿ ಜತೆ ಭಾರತಕ್ಕೆ ಬಂದಿರುವ ಇವರು ಬೆಂಗಳೂರಿನ ತಮ್ಮ ಹಳೆ ಸ್ನೇಹಿತರನ್ನು ಭೇಟಿಯಾಗಿ ಖುಷಿ ಪಟ್ಟಿದ್ದಾರೆ.  ಉಪೇಂದ್ರ ಕುಟುಂಬ, ಅನುಪ್ರಭಾಕರ ಅವರನ್ನು ಭೇಟಿಯಾಗಿ, ಕೆಲಹೊತ್ತು ಮಾತುಕತೆ ನಡೆಸಿ ಸಂಭ್ರಮಿಸಿದ್ದಾರೆ.

ಹಲವು ವರ್ಷಗಳ ಬಳಿಕ ಸ್ವದೇಶಕ್ಕೆ ಆಗಮಿಸಿರುವ ಮಾನ್ಯ ಅವರು ಕನ್ನಡ ಸಿನಿರಂಗದ ಸ್ನೇಹಿತರನ್ನು ಭೇಟಿಯಾಗಿ ಅವರ ಜತೆ ಕಾಲ ಕಳೆದಿದ್ದಾರೆ. ಇನ್ನೂ ಮಾನ್ಯ ಅವರು ಕೊರೊನಾ ಸಂದರ್ಭದಲ್ಲಿ ಸಂಕಷ್ಟದಲ್ಲಿರುವವರಿಗೆ ನಟ ಉಪೇಂದ್ರ ಜತೆ ಕೈಜೋಡಿಸಿ ನೆರವನ್ನು ನೀಡಿದ್ದರು.

ಶ್ರೀಮುರುಳಿ ಕುಟುಂಬದ ಜತೆಯೂ ಉತ್ತಮ ಒಡನಾಟ ಹೊಂದಿರುವ ಮಾನ್ಯ ಅವರು ಈ ಹಿಂದೆ ವಿದೇಶದಲ್ಲಿ ಅವರನ್ನು ಭೇಟಿಯಾಗಿದ್ದರು, ಇದೀಗ  ಅವರ ಮನೆಗೆ ಭೇಟಿ ನೀಡಿ ಮಾನ್ಯಾ ಸಮಯ ಕಳೆದಿದ್ದಾರೆ. ಶ್ರೀಮುರಳಿ ಫ್ಯಾಮಿಲಿ ಭೋಜನ ಸವಿದಿದ್ದಾರೆ.  

ಒಂದು ಕಾಲದಲ್ಲಿ ಮಾನ್ಯ ಅವರು ತೆಲುಗು, ಮಲಯಾಳಂ ಮತ್ತು ಕನ್ನಡ ಸಿನಿಮಾರಂಗದಲ್ಲಿ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದರು.  14ನೇ ವಯಸ್ಸಿನಲ್ಲಿ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟ ಇವರು 2000 ಇಸವಿಯಲ್ಲಿ ಮಲಯಾಳಂ ಸಿನಿಮಾ 'ಜೋಕಾರ್' ಮೂಲಕ ಚಿತ್ತರಂಗಕ್ಕೆ ಪಾದಾರ್ಪಣೆ ಮಾಡಿದರು. ಸುಮಾರು 40ಕ್ಕೂ ಅಧಿಕ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಸದ್ಯ ಇವರು ಚಿತ್ರರಂಗದಿಂದ ದೂರು ಉಳಿದಿದ್ದು ಕುಟುಂಬದ ಜತೆ ಅಮೆರಿಕದಲ್ಲಿ ನೆಲೆಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ