ಪತಿ ವಿಯೋಗದಲ್ಲಿರುವ ನಟಿ ಮೀನಾಗೆ ಎರಡನೇ ಮದುವೆ?

ಬುಧವಾರ, 30 ನವೆಂಬರ್ 2022 (09:43 IST)
ಚೆನ್ನೈ: ಬಹುಭಾಷಾ ನಟಿ ಮೀನಾ ಕೆಲವು ತಿಂಗಳ ಹಿಂದಷ್ಟೇ ಪತಿ ವಿದ್ಯಾಸಾಗರ್ ರನ್ನು ಕಳೆದುಕೊಂಡಿದ್ದಾರೆ. ಇದರ ನಡುವೆ ಮೀನಾ ಎರಡನೇ ಮದುವೆ ಸುದ್ದಿ ಕೇಳಿಬರುತ್ತಿದೆ.

ವಿದ್ಯಾಸಾಗರ್ ಅನಾರೋಗ್ಯದಿಂದಾಗಿ ಐದು ತಿಂಗಳ ಹಿಂದೆ ತೀರಿಕೊಂಡಿದ್ದರು. ಇದಾದ ಬಳಿಕ ಮೀನಾ ತಮ್ಮ ಕೆಲಸಗಳಲ್ಲಿ ತೊಡಗಿಸಿಕೊಂಡು ದುಃಖ ಮರೆಯಲು ಪ್ರಯತ್ನಿಸುತ್ತಿದ್ದಾರೆ. ಈ ದಂಪತಿಗೆ 11 ವರ್ಷದ ಮಗುವೂ ಇದೆ.

ಇದೀಗ ಮಗುವಿನ ಭವಿಷ್ಯದ ದೃಷ್ಟಿಯಿಂದಾದರೂ ಇನ್ನೊಂದು ಮದುವೆಯಾಗುವಂತೆ ಪೋಷಕರೇ ಮೀನಾಗೆ ಒತ್ತಾಯಿಸುತ್ತಿದ್ದಾರಂತೆ. ಈಗಾಗಲೇ ಸಂಬಂಧಿಕರೊಬ್ಬರನ್ನೇ ಮದುವೆಯಾಗಲು ಪೋಷಕರು ಸಲಹೆ ನೀಡಿದ್ದು, ಇದಕ್ಕೆ ಮೀನಾ ಒಪ್ಪಿಗೆಯೂ ಇದೆ ಎಂದು ಮಾಧ‍್ಯಮವೊಂದು ವರದಿ ಮಾಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ