ಬಾಂದ್ರಾದಲ್ಲಿ ಮೂರು ಬೆಡ್ ರೂಂವಿರುವ ಫ್ಯಾಟ್ ಖರೀದಿಸಿದ ನಟಿ ಪೂಜಾ ಹೆಗ್ಡೆ

ಶುಕ್ರವಾರ, 19 ಫೆಬ್ರವರಿ 2021 (12:07 IST)
ಹೈದರಾಬಾದ್ : ದಕ್ಷಿಣ ಭಾರತದ ಖ್ಯಾತ ನಟಿ ಪೂಜಾ ಹೆಗ್ಡೆ ಬಾಂದ್ರಾದಲ್ಲಿ ಅಪಾರ್ಟ್ ಮೆಂಟ್ ವೊಂದರಲ್ಲಿ  ಫ್ಲಾಟ್ ನ್ನು ಖರೀದಿಸಿದ್ದಾರಂತೆ.

ಅವರು ಖರೀದಿಸಿದ ಫ್ಯಾಟ್ ಸ್ವಾಂಕಿ ಸಮುದ್ರದ ಎದುರಿಗಿದ್ದು, ಇದರಲ್ಲಿ ಮೂರು ಬೆಡ್ ರೂಂ, ಕಿಚನ್, ಹಾಲ್ ವಿದೆಯಂತೆ. ಇದು ನಟಿ ಖರೀದಿಸಿದ ಮೊದಲ ಮನೆಯಂತೆ. ಇದರ ಒಳಾಂಗಣ ವಿನ್ಯಾಸದ ವಸ್ತುಗಳು ಮತ್ತು ಮೇಲ್ವಿಚಾರಣೆಯ ಎಲ್ಲಾ ಕೆಲಸವನ್ನು ಸ್ವತಃ ನಟಿಯೇ ವಹಿಸಿಕೊಂಡಿದ್ದಾರಂತೆ.  ಇದರಲ್ಲಿ ಅವರು ಒಬ್ಬರೆ ವಾಸವಿರುತ್ತಾರಂತೆ. ಇದು ಮುಂಬೈಗೆ ಹತ್ತಿರವಿದ್ದು ಶೂಟಿಂಗ್ ಗೆ ತೆರಳಲು ಅನುಕೂಲಕರವಾಗಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ