ಬೆಂಗಳೂರು: ಕಾಂತಾರ ಚಾಪ್ಟರ್ 1 ಸಿನಿಮಾ ನಾಳೆಯಿಂದ ವಿಶ್ವದಾದ್ಯಂತ ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಆದರೆ ಪ್ರೀಮಿಯರ್ ಶೋಗಳು ಇಂದಿನಿಂದಲೇ ಆರಂಭವಾಗಿದೆ.
ಕಾಂತಾರ ಚಾಪ್ಟರ್ 1 ರ ಪ್ರೀಮಿಯರ್ ಶೋ ಇಂದು ಸಂಜೆ 5 ಗಂಟೆಯಿಂದ ವಿವಿಧ ಜಿಲ್ಲೆಗಳ ಪ್ರಮುಖ ಥಿಯೇಟರ್ ಗಳಲ್ಲಿ ಇರಲಿದೆ. ಬೆಂಗಳೂರು, ಮೈಸೂರು, ಕುಂದಾಪುರ, ಮಂಗಳೂರು ಸೇರಿದಂತೆ ಕೆಲವು ಜಿಲ್ಲೆಗಳ ಪ್ರಮುಖ ಥಿಯೇಟರ್ ಗಳಲ್ಲಿ ಪ್ರೀಮಿಯಮ್ ಶೋ ಇರಲಿದೆ.
ಪ್ರೀಮಿಯರ್ ಶೋಗೆ ಬುಕಿಂಗ್ ಆರಂಭವಾದ ಕೆಲವೇ ಕ್ಷಣಗಳಲ್ಲಿ ಟಿಕೆಟ್ ಗಳು ಬಹುತೇಕ ಖಾಲಿಯಾಗಿವೆ. ಪ್ರೀಮಿಯರ್ ಶೋಗೆ ಟಿಕೆಟ್ ದರ 400 ರೂ.ಗಳಿಂದ 1100 ರೂ.ಗಳವರೆಗೂ ಇರುತ್ತದೆ.
ಬಹುತೇಕ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಇಂದು ಮೂರರಿಂದ ನಾಲ್ಕು ಶೋಗಳು ಆಯೋಜನೆಯಾಗಿವೆ. ಬಹುತೇಕ ಟಿಕೆಟ್ ಗಳು ಬಿಕರಿಯಾಗಿವೆ. ನಾಳೆಯೂ ಬಹುತೇಕ ಎಲ್ಲಾ ಚಿತ್ರಮಂದಿರಗಳೂ ಫುಲ್ ಆಗಿವೆ.