ಭೀಮನ ಅಮವಾಸ್ಯೆಗೆ ಪತಿ ಪಾದ ಪೂಜೆ ಮಾಡಿ ಟ್ರೋಲರ್ ಗಳಿಗೆ ಟಾಂಗ್ ಕೊಟ್ಟ ನಟಿ ಪ್ರಣೀತಾ
ಪ್ರಣೀತಾ ಕಳೆದ ವರ್ಷವೂ ಪತಿಯ ಪಾದ ಪೂಜೆ ಮಾಡಿ ಫೋಟೋ ಹಂಚಿಕೊಂಡಿದ್ದರು. ಆ ವೇಳೆ ಕೆಲವರು ಅವರನ್ನು ಟ್ರೋಲ್ ಮಾಡಿದ್ದರು. ಇದೇ ಕಾರಣಕ್ಕೆ ಈ ಬಾರಿ ಅವರು ಫೋಟೋ ಹಾಕಿದ್ದಲ್ಲದೆ, ತಮ್ಮನ್ನು ಟ್ರೋಲ್ ಮಾಡುವವರಿಗೆ ಮುಂಚಿತವಾಗಿಯೇ ಉತ್ತರ ನೀಡಿದ್ದಾರೆ.
ಕಳೆದ ವರ್ಷ ನಾನು ಪಾದ ಪೂಜೆ ಮಾಡಿದ್ದಾಗ ಕೆಲವರು ನನ್ನನ್ನು ಟ್ರೋಲ್ ಮಾಡಿದ್ದರು. ನಿಮಗೆ ಇದು ಪಿತೃಪ್ರಭುತ್ವ ಎನಿಸಬಹುದು. ಆದರೆ ನನಗೆ ಇದು ಮಹತ್ವದ್ದು. ಸನಾತನ ಧರ್ಮದ ಪ್ರತೀ ಆಚರಣೆಯ ಹಿಂದೆ ಅದರದ್ದೇ ಆದ ಮಹತ್ವವಿದೆ. ಹಿಂದೂ ಧರ್ಮದಲ್ಲಿ ಹೆಚ್ಚಿನ ಆಚರಣೆಗಳು ಪಿತೃಪ್ರಭುತ್ವದ್ದು ಎಂಬ ಕೆಲವರ ವಾದ ಆಧಾರರಹಿತ. ಯಾಕೆಂದರೆ ಪ್ರತೀ ಆಚರಣೆಯ ಹಿಂದೆ ಅದರದ್ದೇ ಆದ ಮಹತ್ವವಿದ್ದು, ದೇವತೆಗಳೂ ಪೂಜಿಸುತ್ತಿದ್ದರು ಎಂದಿದ್ದಾರೆ.