ಪ್ರಧಾನಿ ಮೋದಿ ಜೊತೆ ಪಕ್ಕದ್ಮನೆ ಸ್ನೇಹಿತನಂತೆ ಸೆಲ್ಫೀ ತೆಗೆಸಿಕೊಂಡ ಮಾಧವನ್!
ಪ್ರಧಾನಿ ಮೋದಿ ಗೌರವಾರ್ಥ ಫ್ರೆಂಚ್ ಅಧ್ಯಕ್ಷ ಇಮಾನ್ಯುವೆಲ್ ಮ್ಯಾಕ್ರನ್ ಮತ್ತು ಅವರ ಪತ್ನಿ ಔತಣಕೂಟ ಏರ್ಪಡಿಸಿದ್ದರು. ಈ ಔತಣಕೂಟದಲ್ಲಿ ಮಾಧವನ್ ಕೂಡಾ ಪಾಲ್ಗೊಂಡಿದ್ದಾರೆ.
ಈ ವೇಳೆ ಅಧ್ಯಕ್ಷ ಮ್ಯಾಕ್ರನ್ ಮತ್ತು ಪ್ರಧಾನಿ ಮೋದಿ ಜೊತೆಗೆ ಮಾಧವನ್ ಸೆಲ್ಫೀ ತೆಗೆದುಕೊಂಡಿದ್ದಾರೆ. ತೀರಾ ಆತ್ಮೀಯ ಗೆಳೆಯರಂತೆ ಮೋದಿ ಮತ್ತು ಮಾಧವನ್ ಸೆಲ್ಫೀ ಎಲ್ಲರ ಗಮನ ಸೆಳೆದಿದೆ.