22 ವರ್ಷಕ್ಕೇ ನಾನದನ್ನು ಅನುಭವಿಸಿದೆ: ಸೂರ್ಯ ಜೊತೆಗಿನ ಫೋಟೋ ಶೇರ್ ಮಾಡಿದ ರಮ್ಯಾ
ಈ ಸಿನಿಮಾದಲ್ಲಿ ರಮ್ಯಾ ಸ್ಟಾರ್ ನಟ ಸೂರ್ಯ ಪತ್ನಿಯಾಗಿ ಅಭಿನಯಿಸಿದ್ದರು. ಸೂರ್ಯ ಜೊತೆಗೆ ಕೆಲವು ಇಂಟಿಮೇಟ್ ದೃಶ್ಯಗಳಲ್ಲೂ ಅಭಿನಯಿಸಿದ್ದರು. ಇದೀಗ ಆ ಸೂಪರ್ ಹಿಟ್ ಸಿನಿಮಾ ತೆರೆ ಕಂಡು 15 ವರ್ಷಗಳೇ ಕಳೆದಿವೆ.
ಸೂರ್ಯ ಜೊತೆಗಿನ ಈ ಸಿನಿಮಾದ ನೆನಪನ್ನು ಹಂಚಿಕೊಂಡಿರುವ ರಮ್ಯಾ ನನಗೆ ಆಗ 22 ವರ್ಷ. ನಾನು ಅದುವರೆಗೆ ಅನುಭವಿಸಿರದ ತೀವ್ರ ಭಾವನಾತ್ಮಕ ಸನ್ನಿವೇಶವನ್ನು ಇಲ್ಲಿ ಅನುಭವಿಸಿದೆ ಮತ್ತು ಪ್ರಿಯಾ ಆಗಿ ಜೀವನ, ಸಂಬಂಧ, ಕಳೆದುಕೊಳ್ಳುವುದರ ಬಗ್ಗೆ ಸಾಕಷ್ಟು ಕಲಿತೆ. ಪ್ರಿಯಾ ಪಾತ್ರ ತಾಳ್ಮೆ ಮತ್ತು ಪ್ರೀತಿಯ ಸಂಕೇತ. ಇದು ಯಾವತ್ತಿಗೂ ನನ್ನ ಪಾಲಿಗೆ ವಿಶೇಷ ಪಾತ್ರ ಎಂದಿದ್ದಾರೆ.