ಹುಡುಗಿಯರ ದೇಹದಲ್ಲಿ ಆ ಭಾಗ ಇಷ್ಟ ಎಂದ ರಾಮ್ ಗೋಪಾಲ್ ವರ್ಮಾ: ವಿಡಿಯೋ

Krishnaveni K

ಮಂಗಳವಾರ, 18 ಮಾರ್ಚ್ 2025 (09:57 IST)
ಹೈದರಾಬಾದ್: ಹುಡುಗಿಯರ ದೇಹದಲ್ಲಿ ನಿಮಗೆ ಯಾವ ಭಾಗ ಇಷ್ಟ ಎಂದು ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಗೆ ಕೇಳಿದಾಗ ಅವರು ಹೇಳಿದ್ದೇನು? ಅವರ ಈ ಒಂದು ವಿಡಿಯೋಗೆ ಸಾಕಷ್ಟು ಕಾಮೆಂಟ್ ಗಳು ಬರುತ್ತಿವೆ.

ನಿರ್ದೇಶಕ ರಾಮ್ ಗೋಪಾಲ್ ವರ್ಮ ಸದಾ  ವಿವಾದಾತ್ಮಕ ಮಾತುಗಳಿಂದಲೇ ಸುದ್ದಿಯಲ್ಲಿರುತ್ತಾರೆ. ಅದರಲ್ಲೂ ಹೀರೋಯಿನ್ ಗಳ ಜೊತೆ ಚೆಲ್ಲು ಚೆಲ್ಲಾಗಿ ಆಡುವ ವಿಡಿಯೋ, ಫೋಟೋಗಳು ಆಗಾಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ.

ಇದೀಗ ಪ್ರತ್ಯೂಷಾ ಎಂಬ ಯುವನಟಿಯೊಂದಿಗೆ ರಾಮ್ ಗೋಪಾಲ್ ವರ್ಮ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋವನ್ನು ಸ್ವತಃ ಪ್ರತ್ಯೂಷಾ ತಮ್ಮ ಸೋಷಿಯಲ್ ಮೀಡಿಯಾ ಪುಟದಲ್ಲಿ ಪ್ರಕಟಿಸಿದ್ದಾರೆ.

ಪ್ರತ್ಯೂಷಾರನ್ನು ರಾಮ್ ಗೋಪಾಲ್ ವರ್ಮ ಮೊದಲು ತಬ್ಬಿಕೊಳ್ಳುತ್ತಾರೆ. ಆಗ ಪ್ರತ್ಯೂಷಾ ನಿಮಗೆ ಹುಡುಗಿಯರ ದೇಹದಲ್ಲಿ ಯಾವ ಭಾಗ ಇಷ್ಟ  ಎಂದು ಕೇಳುತ್ತಾಳೆ. ಇದಕ್ಕೆ ರಾಮ್ ಗೋಪಾಲ್ ವರ್ಮ, ನಿಜ ಹೇಳಲಾ, ಸುಳ್ಳು ಹೇಳಲಾ ಎಂದು ಪ್ರಶ್ನಿಸುತ್ತಾರೆ. ಆಗ ನಿಜವೇ ಹೇಳಿ ಎನ್ನುತ್ತಾಳೆ ಪ್ರತ್ಯೂಷಾ. ಆಗ ರಾಮ್ ಗೋಪಾಲ್ ವರ್ಮ ‘ನನಗೆ ಹುಡುಗಿಯರ ಎದೆ ಭಾಗ ಮತ್ತು ಹಿಂಭಾಗ ಇಷ್ಟ’ ಎಂದು ಪ್ರತ್ಯೂಷಾಗೆ ಒಂದು ಪಪ್ಪಿ ಕೊಡುತ್ತಾರೆ. ಈ ವಿಡಿಯೋ ಇಲ್ಲಿದೆ ನೋಡಿ.

 
 
 
 
View this post on Instagram
 
 
 
 
 
 
 
 
 
 
 

A post shared by Prathyusha (@prathyushaonscreen)

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ