ಬುಲ್ ಬುಲ್ ತಾರೆ ರಚಿತಾ ರಾಮ್‌ ಮನದಾಳದ ಆಸೆ

ಬುಧವಾರ, 21 ಡಿಸೆಂಬರ್ 2016 (12:52 IST)
ಎಲ್ಲಾ ತಾರೆಗಳಿಗೂ ಒಂದಲ್ಲಾ ಒಂದು ಕನಸು ಇರುತ್ತದೆ. ಆದರೆ ನಮ್ಮ ರಚಿತಾ ರಾಮ್ ಮನದಾಳದಲ್ಲೂ ಒಂದು ಆಸೆ ಚಿಗುರೊಡೆಯುತ್ತಿದೆ. ಅದೇನೆಂದರೆ ಮಲಯಾಳಂ ಚಿತ್ರದಲ್ಲಿ ಅಭಿನಯಿಸಬೇಕು ಅನ್ನೋದು!
 
ಅಷ್ಟೇ ಅಲ್ಲ ಬೆಂಗಳೂರು ಡೇಸ್ ಚಿತ್ರದ ಮೂಲಕ ಜನಪ್ರಿಯವಾಗಿರುವ ಮಮ್ಮುಟ್ಟಿ ಪುತ್ರ ದುಲ್ಕರ್ ಸಲ್ಮಾನ್ ಜೊತೆಗೆ ತೆರೆ ಹಂಚಿಕೊಳ್ಳಬೇಕು ಅನ್ನೋ ಆಸೆ ಇದೆಯಂತೆ ಈ ಗುಳಿಕೆನ್ನೆ ಬೆಡಗಿಗೆ. 2012ರಿಂದಲೂ ದುಲ್ಕರ್ ಸಲ್ಮಾನ್ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
 
ಆದರೆ 2014ರಲ್ಲಿ ತೆರೆಕಂಡ ಬೆಂಗಳೂರು ಡೇಸ್ ಚಿತ್ರ ಅವರಿಗೆ ಒಳ್ಳೇ ಹೆಸರು ತಂದುಕೊಟ್ಟಿದೆ. ಈಗ ವರ್ಷಕ್ಕೆ ನಾಲ್ಕೈದು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ ದುಲ್ಕರ್. ಅಂತಹ ಯಂಗ್ ಹೀರೋ ಜೊತೆ ಅಭಿನಯಿಸಬೇಕು ಅಂತ ಬುಲ್ ಬುಲ್ ರಾಣಿ ಆಸೆ ಪಟ್ಟಿದ್ದಾರೆ. ಇದರಲ್ಲೇನು ತಪ್ಪಿಲ್ಲ ಬಿಡಿ. ನಮ್ಮ ನೆಲದ ಹುಡುಗಿ ಬೇರೆ ಭಾಷೆಯಲ್ಲೂ ಮಿಂಚಲಿ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ