ಚಿತ್ರರಂಗದವರಿಗೆ ಗೌರವ ಕೊಡಿ ಎಂದ ಕಿಚ್ಚ ಸುದೀಪ್ ಗೆ ಡಿಕೆ ಶಿವಕುಮಾರ್ ಹೇಳಿದ್ದೇನು

Krishnaveni K

ಶನಿವಾರ, 21 ಜೂನ್ 2025 (13:56 IST)
ಬೆಂಗಳೂರು: ಚಿತ್ರರಂಗದವರ ನಟ್ಟು ಬೋಲ್ಟ್ ಸರಿ ಮಾಡ್ತೀನಿ ಎಂದಿದ್ದ ಡಿಸಿಎಂ ಡಿಕೆ ಶಿವಕುಮಾರ್ ಗೆ ನಟ ಕಿಚ್ಚ ಸುದೀಪ್ ಸಿನಿಮಾದವರಿಗೂ ಗೌರವ ಕೊಡಿ ಎಂದಿದ್ದಾರೆ. ಇದಕ್ಕೀಗ ಡಿಕೆಶಿ ತಿರುಗೇಟು ನೀಡಿದ್ದಾರೆ.

ಮಾಧ್ಯಮವೊಂದರ ಕಾರ್ಯಕ್ರಮದಲ್ಲಿ ಭಾಗಿಯಾದ ಕಿಚ್ಚ ಸುದೀಪ್ ಗೆ ನಟ್ಟು ಬೋಲ್ಟ್ ಹೇಳಿಕೆ ಬಗ್ಗೆ ಪ್ರಶ್ನೆ ಎದುರಾಗಿತ್ತು. ಇದಕ್ಕೆ ಉತ್ತರಿಸಿದ್ದ ಅವರು ‘ನಾವು ಓಡಾಡೋ ಕಾರುಗಳ ನಟ್ಟು ಬೋಲ್ಟ್ ಸರಿ ಮಾಡೋಕೆ ಮೆಕ್ಯಾನಿಕ್ ಬೇಕು. ಅದರ ಬಗ್ಗೆ ನಾನು ಮಾತನಾಡಲು ಹೋದರೆ ಸರಿಯಾಗಲ್ಲ. ಯಾಕೆಂದರೆ ಕಾರಿನ ವಿಚಾರ ಮೆಕ್ಯಾನಿಕ್ ಗಳಿಗೆ ಮಾತ್ರ ಗೊತ್ತಿರುತ್ತದೆ. ಅದೇ ರೀತಿ ಚಿತ್ರರಂಗದವರ ಬಗ್ಗೆ ಚಿತ್ರರಂಗದವರಿಗೇ ಗೊತ್ತು. ಚಿತ್ರರಂಗದವರಿಗೂ ಗೌರವ ಕೊಡಿ’ ಎಂದು ಕಿಚ್ಚ ಸುದೀಪ್ ಹೇಳಿದ್ದರು.

ಅವರ ಹೇಳಿಕೆ ಡಿಕೆ ಶಿವಕುಮಾರ್ ಇಂದು ತಿರುಗೇಟು ನೀಡಿದ್ದಾರೆ. ಮಾಧ್ಯಮಗಳು ಸುದೀಪ್ ಅವರ ಪ್ರತಿಕ್ರಿಯೆ ಬಗ್ಗೆ ಕೇಳಿದ್ದಕ್ಕೆ ಡಿಕೆ ಶಿವಕುಮಾರ್ ‘ಎಲ್ಲದಕ್ಕೂ ಕಾಲವೇ ಉತ್ತರಿಸುತ್ತದೆ’ ಎಂದಿದ್ದಾರೆ. ಡಿಕೆ ಶಿವಕುಮಾರ್ ಮತ್ತು ಕಿಚ್ಚ ಸುದೀಪ್ ನಡುವೆ ಉತ್ತಮ ಬಾಂಧವ್ಯವಿದೆ. ಬೆಂಗಳೂರು ಆಂತಾರಾಷ್ಟ್ರೀಯ ಸಿನಿಮಾ ಉತ್ಸವದಲ್ಲಿ ಡಿಕೆಶಿ ಚಿತ್ರರಂಗದವರು ಗೈರಾಗಿದ್ದಕ್ಕೆ ‘ನಟ್ಟು ಬೋಲ್ಟ್ ಸರಿ ಮಾಡೋದು ಹೇಗೆ ಗೊತ್ತು’ ಎಂದಿದ್ದಕ್ಕೆ ಸುದೀಪ್ ಮುಲಾಜಿಲ್ಲದೇ ತಿರುಗೇಟು ಕೊಟ್ಟಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ