ತಮಿಳು ನಟ ಸೂರ್ಯ ಜೊತೆಗಿನ ಸಿನಿಮಾ ನೆನೆಸಿಕೊಂಡ ರಮ್ಯಾ

ಸೋಮವಾರ, 15 ನವೆಂಬರ್ 2021 (08:45 IST)
ಬೆಂಗಳೂರು: ನಟಿ ರಮ್ಯಾ ಹಿಂದೆ ತಮಿಳಿನಲ್ಲೂ ನಟಿಸಿ ಸೈ ಎನಿಸಿಕೊಂಡವರು. ಸ್ಟಾರ್ ನಟ ಸೂರ್ಯ ಜೊತೆ ವಾರಣಂ ಆಯಿರಂ ಎಂಬ ಸಿನಿಮಾದಲ್ಲಿ ನಟಿಸಿದ್ದರು.


ಈ ಸಿನಿಮಾ ಬಿಡುಗಡೆಯಾಗಿ 13 ವರ್ಷ ಕಳೆದ ಹಿನ್ನಲೆಯಲ್ಲಿ ರಮ್ಯಾ ಈ ಸಿನಿಮಾ ಬಗ್ಗೆ ಮತ್ತು ಆ ಸಿನಿಮಾದಲ್ಲಿ ಸೂರ್ಯ ಜೊತೆ ನಟಿಸಿದ ಅನುಭವ ಹಂಚಿಕೊಂಡಿದ್ದಾರೆ.

‘ವಾರಣಂ ಆಯಿರಂಗೆ 13 ವರ್ಷ. ನಟ ಸೂರ್ಯರಿಂದ ಸಾಕಷ್ಟು ಕಲಿತಿದ್ದೆ. ಈ ಸಿನಿಮಾದಲ್ಲಿ ನಮ್ಮದು ತುಂಬಾ ಇಂಟಿಮೇಟ್ ದೃಶ್ಯಗಳಿತ್ತು. ಹಾಗಿದ್ದರೂ ಅದನ್ನು ಅವರು ತುಂಬಾ ಸುಲಭ ಮಾಡಿದರು. ಅವರ ಜೈಭೀಮ್ ಸಿನಿಮಾ ಇತ್ತೀಚೆಗೆ ಬಿಡುಗಡೆಯಾಗಿದೆ. ಅದನ್ನು ವೀಕ್ಷಿಸಿ’ ಎಂದು ರಮ್ಯಾ ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ