ಜಿಮ್ ನಲ್ಲಿ ವರ್ಕೌಟ್ ಮಾಡುವಾಗ ಎಡವಟ್ಟು: ಜ್ಯೂ. ಎನ್ ಟಿಆರ್ ಗೆ ಗಾಯ
ಜಿಮ್ ನಲ್ಲಿ ವರ್ಕೌಟ್ ಮಾಡುವಾಗ ಜ್ಯೂ.ಎನ್ ಟಿಆರ್ ಬಿದ್ದು ಕೈಗೆ ಪೆಟ್ಟುಮಾಡಿಕೊಂಡಿದ್ದಾರೆ. ತಕ್ಷಣವೇ ಆಸ್ಪತ್ರೆಗೆ ದಾಖಲಾಗಿ ಅದಕ್ಕೆ ಸಣ್ಣ ಶಸ್ತ್ರಚಿಕಿತ್ಸೆಯನ್ನೂ ಮಾಡಿಸಿದ್ದಾರೆ.
ದೀಪಾವಳಿ ಸಂದರ್ಭದಲ್ಲಿ ಮಕ್ಕಳೊಂದಿಗಿನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾಗ ಅವರ ಬೆರಳಿಗೆ ಬ್ಯಾಂಡೇಜ್ ಸುತ್ತಿಕೊಂಡಿರುವುದು ಅಭಿಮಾನಿಗಳ ಗಮನಕ್ಕೆ ಬಂದಿತ್ತು. ಅದಕ್ಕೀಗ ಸ್ಪಷ್ಟನೆ ಸಿಕ್ಕಿದೆ.