India Pakistan: ಯುದ್ಧದ ಕಾರ್ಮೋಡ ಬೆನ್ನಲ್ಲೇ ಭಾರತದಿಂದ ಮತ್ತೊಂದು ದಿಟ್ಟ ಹೆಜ್ಜೆ
ಪಹಲ್ಗಾಮ್ ನಲ್ಲಿ ಉಗ್ರರು ನರಮೇಧ ಮಾಡಿದ ಬಳಿಕ ಗಡಿಯಲ್ಲಿ ಯುದ್ಧದ ವಾತಾವರಣವಿದೆ. ಈಗಾಗಲೇ ಭಾರತೀಯ ವಾಯುಸೇನೆ, ನೌಕಾಸೇನೆ ವಿಶೇಷ ವಿಡಿಯೋ ಮೂಲಕ ತಮ್ಮ ಸಾಮರ್ಥ್ಯದ ಬಗ್ಗೆ ಪಾಕಿಸ್ತಾನಕ್ಕೆ ಎಚ್ಚರಿಕೆ ಕೊಟ್ಟಿದೆ.
ಪಹಲ್ಗಾಮ್ ದಾಳಿ ನಡೆದ ಮರುದಿನವೇ ಭಾರತೀಯ ನೌಕಾಸೇನೆ ಪಾಕಿಸ್ತಾನದ ಸಮುದ್ರ ಗಡಿಯಲ್ಲಿ ಐಎನ್ಎಸ್ ವಿಕ್ರಾಂತ್ ಯುದ್ಧ ನೌಕೆಯನ್ನು ನಿಲ್ಲಿಸಿತ್ತು. ಜೊತೆಗೆ ಬ್ರಹ್ಮೋಸ್ ಕ್ಷಿಪಣಿ ಪರೀಕ್ಷೆ ಮಾಡುವ ವಿಡಿಯೋ ಪ್ರಕಟಿಸಿತ್ತು.
ಇದೀಗ ಭಾರತೀಯ ಸೇನೆ ಮತ್ತೊಂದು ದಿಟ್ಟ ಹೆಜ್ಜೆಯಿಟ್ಟಿದೆ. ಸೂರತ್ ಬಳಿ ಐಎನ್ಎಸ್ ಸೂರತ್ ನೌಕೆಯನ್ನು ತಂದು ನಿಲ್ಲಿಸಲಾಗಿದೆ. ಇನ್ನೊಂದೆ ಗಡಿ ನಿಯಂತ್ರಣ ರೇಖೆ ಬಳಿ ತನ್ನ ಯುದ್ಧ ಟ್ಯಾಂಕರ್ ಗಳನ್ನೂ ರವಾನಿಸಿದೆ. ಈ ಮೂಲಕ ಯಾವುದೇ ಪರಿಸ್ಥಿತಿ ಎದುರಿಸಲು ಸಿದ್ಧ ಎಂಬ ಸಂದೇಶ ರವಾನಿಸಿದೆ.